Showing posts with label ನಂಬಿದೇ ಗುರುವರಾ ನಂಬಿದೇ ankita krishnavittal. Show all posts
Showing posts with label ನಂಬಿದೇ ಗುರುವರಾ ನಂಬಿದೇ ankita krishnavittal. Show all posts

Monday, 6 September 2021

ನಂಬಿದೇ ಗುರುವರಾ ನಂಬಿದೇ ankita krishnavittala

 ರಾಗ: [ಬಸಂತ್ ಬಹಾರ್] ತಾಳ: [ಆದಿ]

ನಂಬಿದೇ ಗುರುವರಾ ನಂಬಿದೇ


ನಂಬಿದೆ ಗುರುಸಾರ್ವಭೌಮಾ

ತುಂಬುಮನದೊಳು ಹರಿಭಕ್ತಿ ನಿಸ್ಸೀಮ ||ಆಹಾ||

ಅಂಬುಜೋದ್ಭವಪಿತನ ಕಂಭದಿ ತೋರಿದ

ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ.


ದಾಸನೆಂದಡಿಗೆ ಬಿದ್ದೆನೋ ಈಗ

ದೋಷ ನಾಶಮಾಡೋ ಎನಗೆ ಬೇಗ ||ಆಹಾ||

ವಾಸುಕಿಶಯನನ ಬ್ಯಾಸರದೆ ಸ್ತುತಿಸಿ

ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1

ಪಾತಕರೊಳಗೆ ಅಗ್ರೇಸರನಾನು

ಪೂತಮಾಡುವರೊಳಗೆ ನಿಸ್ಸೀಮ ನೀನು ||ಆಹಾ||

ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ

ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ

ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ

ಶ್ರೀಪಾದರಾಯರ ಪ್ರಿಯಶಿಷ್ಯನಾದೆ ||ಆಹಾ||

ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ

ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3

ಮಧ್ವಶಾಸ್ತ್ರಗಳ ಮಂದರರಿಯದಿರಲು

ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ||ಆಹಾ||

ಆದರದಿಂದಲಿ ಪುರಂದರ ಕನಕರಿಗೆ

ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4

ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ

ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ||ಆಹಾ||

ಕತ್ತಲೆ ಅದ್ವೈತವಾದಗಳಿಗೆಲ್ಲಾ

ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5

ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ

ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ||ಆಹಾ||

ಅಪ್ಪ ಶ್ರೀರಾಮರ ಪೂಜಿಸಬೇಕೆಂದು

ಒಪ್ಪಿಸನ್ಯಾಸವ ರಾಘವೇಂದ್ರನಾದ 6

ಸಮುದದಿ ದೇಶದೇಶವ ಚರಿಸಿದೇ ಸಮ-

ಯದಿ ಸುಜನರಕ್ಲೇಶಗಳಳಿದೇ ||ಆಹಾ||

ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ

ಬುಧರಿಗೆ ತತ್ವಕನ್ನಡಿತೋರ್ದ ಗುಣಗಣನಿಧಿಯೇ 7

ಪರಿಪರಿ ಮಹಿಮೆಯ ತೋರುವ ಗುರುವೇ

ಸುರತರು ಅಂದದಿ ಹರಕೆಗಳೀವೆ ಪ್ರಭುವೇ ||ಆಹಾ||

ಮೂರೆರಡು ಒಂದುನೂರು ವರುಷ ಪರಿಯಂತ

ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು 8

ದಯದಿಂದ ನೋಡೆನ್ನ ದೀನೋದ್ಧಾರ

ಜೀಯನೆ ಭವಬಿಡಿಸು ಕರುಣಾಸಾರ ||ಆಹಾ||

ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣವಿಠಲನ ಹೃ-

ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9

***