Showing posts with label ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ home remedy for ill health ಮನೆ ಮದ್ದು. Show all posts
Showing posts with label ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ home remedy for ill health ಮನೆ ಮದ್ದು. Show all posts

Monday, 15 March 2021

ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ home remedy for ill health ಮನೆ ಮದ್ದು

 * ಮನೆ ಮದ್ದು *


ಕುಂತ್ರೆ ನಿಂತ್ರೆ ಡಾಕ್ಟರ್ ಹತ್ರೆ ಓಡ ಬ್ಯಾಡ್ರೋ

ಮನೆಮದ್ದು ಅಂಗೈಲಿದ್ರೆ ‌ಚಿಂತೆಯಾಕ್ರೋ ll


ನೆಗಡಿ ಶೀತ ಕೆಮ್ಮು ಆದ್ರೆ ನಡುಗ ಬ್ಯಾಡ್ರೋ

ದೊಡ್ಡಪತ್ರೆ ಜೇನುತುಪ್ಪ ಕುಡಿದು ನೋಡ್ರೋ

 ||೧||


ಹೊಟ್ಟೆಬಾಧೆ ಬಂದದ್ದಾದ್ರೆ ಹೆದರಬ್ಯಾಡ್ರೋ

ಆಗೊಮ್ಮೆ ಈಗೊಮ್ಮೆ ಜೀರಿಗೆ ಕಷಾಯ ಕುಡ್ದು ನೋಡ್ರೋ

||೨||


ಕಫಕ್ಕೇನು ಮದ್ದಿಲ್ವೆ? ಕೇಳ ಬ್ಯಾಡ್ರೋ

ಕಾಳ್ಮೆಣ್ಸು-ಶುಂಠಿ ಕಷಾಯ ಇಲ್ವೇನು ತಿಳ್ದು ನೋಡ್ರೋ 

||೩||


ಬಹಳವೇನು ಬಾಯಾರಿಕೆಯೇ ಏನು ಗೋಳ್ರೋ

ತುಳಸಿ ಎಲೆಯ ಸೇವ್ನೆ ಮಾಡಿ ಆಮೇಲ್ಹೇಳ್ರೋ ||೪||


ಬಾಯಾರಿಕೆಯೇ ಇಲ್ಲವೆಂದು ಮರುಗಬ್ಯಾಡ್ರೋ

ಬೆಲ್ಲವನ್ನು ಸವಿಯುತ್ತ ಸುಧಾರ್ಸಿಕೊಳ್ರೋ ||೫||


ಪಿತ್ತವಾದ್ರೆ ಚಹಾ ಸೇವನೆ ಬಿಟ್ಟುಬಿಡ್ರೋ

ಉಷ್ಣವಾದ್ರೆ ಕಾಫಿ ಕುಡಿಯೋದ್ ಬಂದುಮಾಡ್ರೋ 

||೬||


ಬಹುಮೂತ್ರಕೆ ದಾಲ್ಚಿನ್ನಿಯ ಮದ್ದು ಸರಳ ಕಣ್ರೋ

ಮೂತ್ರ ತಡೆಗೆ ಮತ್ತೆ ಜೀರ್ಗೆ ಕಷಾಯ ಮಾಡ್ರೋ ||೭||


ಮಧುಮೇಹಕ್ಕೆ ರಾಗಿ ಮುದ್ದೆ ಮೆದ್ದು ನೋಡ್ರೋ

ಮೂಲವ್ಯಾಧಿಗೆ  ಎಳ್ಳು ಸೇವ್ನೆ (ನಿತ್ಯ) ಬಿಡ ಬ್ಯಾಡ್ರೋ 

||೮||


ವಾಂತಿಯಾದ್ರೆ ಎಳ್ನೀರ್-ಐತೆ ಹೆದರ ಬ್ಯಾಡ್ರೋ

ಭೇದಿ ಆದ್ರೆ ಅನ್ನ ಮಜ್ಜಿಗೆ ಊಟ ಮಾಡ್ರೋ ||೯||


ಹಲ್ಲು ಸಡಿಲತೆಗೆ ದಾಳಿಂಬೆ ಸಿಪ್ಪೆಯ ಕಷಾಯ ಕೊಡ್ರೋ

ಮೊಸರು ತಿಂದು ಕಾಮಾಲೆ ರೋಗವ ದೂರವಿಡ್ರೋ 

 ||೧೦||


ತುಟಿ ಸೀಳಿದಿಯೇ? ಹಾಲಿನ ಕೆನೆಯ ಹಚ್ಚಿ ನೋಡ್ರೋ

ತೆಳ್ಳಗಾಗಲು ಬಿಸಿ ನೀರ್ ಕುಡಿವುಪಚಾರವ ಮಾಡ್ರೋ  ||೧೧||


ರಕ್ತ ಹೀನತೆಗೆ ಪಾಲಕ್ ಸೊಪ್ಪು ಇಲ್ಲಿದೆ ಕಾಣ್ರೋ

ಹೊಟ್ಟೆಯ ಹರಳಿಗೆ ಬಾಳೆದಿಂಡಿನ ಪಲ್ಯವ ತಿನ್ರೋ 

||೧೨||


ತಲೆ ಸುತ್ತುವುದಕೆ ಬೆಳ್ಳುಳ್ಳಿ ತಿನ್ನುತ

ಗುಣಮುಖರಾಗ್ರೋ

ರಕ್ತ ದೋಷಕೆ ಕೇಸರಿ ಹಾಲಿನ ಸವಿ-ಸುಖ ನೀಡ್ರೋ 

||೧೩||


ಓಂ ಕಾಳಲಿದೆ ಹಸಿವೆ ಮಾಡುವ ಶಕ್ತಿಯ ಕಾಣ್ರೋ

ನೀಗದ ಹಸಿವೆಗೆ ಹಸಿ ಹಸಿ ಶೇಂಗಾ ಚಮತ್ಕಾರ ನೋಡ್ರೋ ||೧೪||


ಮಲೆನಾಡಿನ ಮಲೆ ಮಡಿಲಿನ ಮದ್ದಿನ ಮಹಿಮೆಯ ಪಾಡ್ರೋ

ಭಾಗ್ಯದ ಆರೋಗ್ಯದ  ಬುನಾದಿಯಿದು ಮೂಗ-ಮುರಿಯಬ್ಯಾಡ್ರೋ

||೧೫||


ವಿಷಮ ಸಂದರ್ಭಕೆ ರಾಮ ಬಾಣವು ಮನೆ ಮದ್ದದು

ನೋಡ್ರೋ

ದಿವ್ಯೌಷಧಗಳ ಜ್ಞಾನಭಂಡಾರಕೆ ನಮೋನಮನ ಹಾಡ್ರೋ ||೧೬||

*******