Showing posts with label ಮೀನಲೋಚನೆ ಅಂಬಾ ದೀನಪಾಲಕೆ prasannashreenivasa. Show all posts
Showing posts with label ಮೀನಲೋಚನೆ ಅಂಬಾ ದೀನಪಾಲಕೆ prasannashreenivasa. Show all posts

Thursday, 5 August 2021

ಮೀನಲೋಚನೆ ಅಂಬಾ ದೀನಪಾಲಕೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಮದುರೈ ಮೀನಾಕ್ಷಿ ಸ್ತೋತ್ರ


ಮೀನಲೋಚನೆ ಅಂಬಾ ದೀನಪಾಲಕೆ

ನಿಂತಲ್ಲಿ ಶರಣೆಂದೆ ಎನ್ನ ಪೊರೆವ ಭಾರ ನಿನ್ನದೇ ಮಾತೆ ಪ


ಕಣ್ಣು ಕಿವಿ ನಾಲ್ಕು ಕುದುರೆ ದೇಹವೆಂಬ ಹರಿಯರಥಕೆ

ನಿನ್ನಧೀನ ಅಶ್ವಗತಿ ಸನ್ಮಾರ್ಗದಿ ನಡೆಸಿ ಕಾಯೆ1

ಕಂಡು ಕೇಳಿ ನುಡಿವದೆಲ್ಲ ಉಂಡು ಉಟ್ಟು ಮಾಳ್ಪುದೆಲ್ಲ

ಪುಂಡರೀಕ ನಯನ ಶ್ರೀಶ ರಥಿಕ ಪ್ರೀತಿ ಆಗೆ ಮಾಡೆ 2

ಮಂದಜಾಸನ ತಾತ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯ

ಇಂದುಧರÀ ಸತಿಯೇ ಶರಣು ಸ್ಕಂಧ ವಿಘ್ನರಾಜರ ಮಾತೆ 3

***