ಸ್ವಾಮಿ ಪುಷ್ಕರಣಿತೀರ ನಿಲಯ ನಮೋ l
ಸ್ವಾಮಿ ವರಹ ವೆಂಕಟನಾಯಕ l
ಸ್ವಾಮಿ ಪಾಹಿ ಪಾಹಿ ತ್ರಾಹಿ l
ಸ್ವಾಮಿ ವರಹ ವೇಂಕಟನಾಯಕ ll ಪ ll
ಯಜ್ಞಗಾತ್ರ ವಿಧಿನುತ ಪ್ರಭು ಶ್ರೀ l
ಯಜ್ಞ ವರಹ ವೇಂಕಟನಾಯಕ l ಯಜ್ಞ ಭೋಕ್ತ್ರು ಹೇಮಾಂಬಕಹರ l
ಯಜ್ಞವರಹ ವೇಂಕಟನಾಯಕ ll 1 ll
ಭೂ ಭಯದೂರ ಧರಾ ಮನೋಹರ l
ಭೂವರಹ ವೇಂಕಟನಾಯಕ l
ಶೋಭಿತ ಬಾಲಚಂದ್ರೋಪಮ ಕ್ರೋಡ l
ಭೂವರಹ ವೇಂಕಟನಾಯಕ ll 2 ll
ಶ್ವೇತ ಹಯವದನ ಶ್ವೇತಾಂಬರ ಧರ l
ಶ್ವೇತವಾಹನ ಸಖ ಶ್ವೇತನಿಭ l
ಶ್ವೇತಾದ್ರಿಶಾರ್ಚಿತ ಪಾದಕಮಲ l
ಶ್ವೇತವರಹ ವೇಂಕಟನಾಯಕ ll 3 ll
******