Showing posts with label ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ramesha. Show all posts
Showing posts with label ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ramesha. Show all posts

Wednesday, 4 August 2021

ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ankita ramesha

 ..

ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ.


ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1

ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2

ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3

ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4

ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5

ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6

ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7

****