Showing posts with label ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ prasannavenkata. Show all posts
Showing posts with label ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ prasannavenkata. Show all posts

Thursday, 7 November 2019

ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ ankita prasannavenkata

by ಪ್ರಸನ್ನವೆಂಕಟದಾಸರು
ಆಳಬೇಕೈ ಸುಮತಿ ಪತಿವ್ರತೆಯಜಾಳಿಸಬೇಕೈ 
ಕುಬುದ್ಧಿಯ ಬುಧರು ಪ.

ನಾಗರಕ್ಷಕನಪಾದಹೊಂದಿ ವಿಷಯ 
ಸ್ವಾರ್ಥನೀಗಿಹ ಮಡದಿಯ ಕೂಡಬೇಕೈಭಾಗವತರನು 
ಮಲಿನಿಪ ಮೋಹಿಯಮೂಗು ಮುಂದಲೆ 
ಮೊಲೆ ಕೊಯಿದಟ್ಟಬೇಕೈ 1

ಶೀಲವಿಡಿದು ನವನಾರೇರ ಸಖ್ಯದಲಿಆಲಯ
ನಡೆಸುವಳಿರಲಿಬೇಕಯ್ಯ
ಆಲಿಕುಣಿಸಿ ನವ ಪುರುಷರ ಕಂಡು 
ತಾಮ್ಯಾಲೆ ಬೀಳುವಳಜಿಹ್ವೆಸೀಳಬೇಕೈ2

ಷಂಡಗಂಡಗೆ ಹಿತ ಹೇಳಿ ಅಂಗವದಂಡಿಸಿ 
ಕೊಳುವಳ ನಂಬಬೇಕೈಕಂಡ ಬೀದಿಲಿ ಸಾಧು ಕೊಂಡೆಯಾಡುವಳಮಂಡೆಬೋಳಿಸಿ 
ಕತ್ತೆನೇರಿಸಬೇಕೈ3

ಮನೆಗೆಲಸದಲಿಟ್ಟು ಮಹಾತ್ಮರ 
ಸೇವೆಗೆಂದೂದಣಿಯದ ರಂಭೆಯ ಒಲಿಸಬೇಕು
ಅಣಕಿಸಿ ಒಲಿದರ ನೀಚಾನುಕೂಲೆಯಾದತನಗಲ್ಲದವಳ 
ಹೊಳೆ ನೂಕಬೇಕೈ 4

ಶಶಿರವಿರಾಶಿ ಮೈ ಹೊಳವಿಲಿ ಮೆರೆವಕುಶಲಗೆ 
ಮನವಿಟ್ಟ ಜಾಣೆ ಬೇಕೈಪ್ರಸನ್ನವೆಂಕಟಪತಿಯಾಕಾರ 
ನೋಡಿ ತಾಅಶರೀರನೆಂಬಳ್ಗೆ ವಿಷವಿಕ್ಕಿರೈ 5
*******