Audio by Mrs. Nandini Sripad
ಶ್ರೀ ಪ್ರಾಣೇಶವಿಠಲದಾಸರ ಕೃತಿ
ರಾಗ ಕಾಪಿ ಖಂಡಛಾಪುತಾಳ
ವ್ಯಾಸರಾಯರ ಬೇಸರದೆ ನೆನೆದಾಸೆ ಪೂರೈಸಿಕೊಂಬೆ ನಾ॥ ಪ ॥
ದಾಸರಾಯರಿಗಾಸು ಮಂತ್ರೋಪದೇಶ ಕರುಣದಿ ಮಾಡಿದ ।
ದೇಶದೊಳಗೆ ವಿಶೇಷ ಮೆರೆದು ಅಶೇಷ ಜನರುದ್ಧರಿಸಿದ ॥ 1 ॥
ವಾಸುದೇವನ ದ್ವೇಷಿಗಳ ಅನಾಯಾಸದಿಂ ನಿರಾಕರಿಸಿದ ।
ದಾಸವರ್ಗವ ಪೋಷಿಸಲು ನಿರ್ದೋಷ ಗ್ರಂಥ ವಿರಚಿಸಿದ ॥ 2 ॥
ಭಾಸುರ ಚರಿತ ಭೇಶಭಾಸ ಸುಕಾಷಾಯಾಂಬರ ಧರಿಸಿದ ।
ವೀಶವಾಹನ ಕ್ಲೇಶಹ ಪ್ರಾಣೇಶವಿಠ್ಠಲ ನೊಲಿಸಿದ ॥ 3 ॥
**********
ವ್ಯಾಸರಾಯರ ಬೇಸರದೇ ನೆನೆ |ದಾಸೆ ಪೂರ್ತಿಸಿಕೊಂಬೆ ನಾಂ ||pa||
ದಾಸರಾಯರಿಗಾಸು ಮಂತ್ರೋಪ |ದೇಶ ಕರುಣದಿ ಮಾಡಿದ ||
ದೇಶದೊಳಗೆ ವಿಶೇಷ ಮೆರೆದು ಅ |ಶೇಷ ಜನರುದ್ಧರಿಸಿದ ||1||
ವಾಸುದೇವನ ದ್ವೇಷಿಗಳ ಅನಾ |ಯಾಸದಿಂ ನೀ ಕರಿಸಿದ ||
ದಾಸ ವರ್ಗವ ಪೋಷಿಸಲು ನಿ |ರ್ದೋಷ ಗ್ರಂಥ ವಿರಚಿಸಿದ ||2||
ಭಾಸುರ ಚರಿತ ಭೇಶ ಭಾಸ ಸು |ಕಾಷಾಯಾಂಬರ ಧರಿಸಿದ ||
ವೀಶವಾಹನ ಕ್ಲೇಶಹ ಪ್ರಾ |ಣೇಶ ವಿಠ್ಠಲನೊಲಿಸಿದ ||3||
******