Showing posts with label ಅರ್ಧಮನವೀಯಾದಿರು vijaya vittala ankita suladi ಜನಾರ್ದನ ಮಹಾತ್ಮೆ ಸುಳಾದಿ ARDHA MANAVEEYAADIRU JANARDHANA MAHATME SULADI. Show all posts
Showing posts with label ಅರ್ಧಮನವೀಯಾದಿರು vijaya vittala ankita suladi ಜನಾರ್ದನ ಮಹಾತ್ಮೆ ಸುಳಾದಿ ARDHA MANAVEEYAADIRU JANARDHANA MAHATME SULADI. Show all posts

Monday 2 November 2020

ಅರ್ಧಮನವೀಯಾದಿರು vijaya vittala ankita suladi ಜನಾರ್ದನ ಮಹಾತ್ಮೆ ಸುಳಾದಿ ARDHA MANAVEEYAADIRU JANARDHANA MAHATME SULADI

 

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವಲ್ಕಲ ಕ್ಷೇತ್ರಸ್ಥ ಜನಾರ್ದನಸ್ವಾಮಿ ಮಹಾತ್ಮೆ ಸುಳಾದಿ 


 ರಾಗ : ಗೌಳ 


 ಧ್ರುವತಾಳ 


ಅರ್ಧಮನವೀಯಾದಿರು ಬಿದ್ದೆ ನಿನ್ನ ಪಾದಕ್ಕೆ 

ಉದ್ಧರಿಪುದು ಸಮುದ್ರ ಶಯ್ಯಾ 

ಹದ್ದು ಹಾವಿಗೆ ಹರಿದೆದ್ದು ಕವಿದಂತೆ 

ಕೃದ್ಧಾಗಳಿಂದಲಿ ಪೊಂದಿಪ್ಪನೊ 

ಒದ್ದು ಕಡಿಗೆ ನೂಕೊ ಸದ್ದಡಗಿಸಿ ಖಳರ 

ಸದ್ದಾಗದಂತೆ ಒಳಗೆ ತಿದ್ದಿಡುವುದು 

ಶುದ್ಧ ಸ್ವಭಾವ ನಮ್ಮ ವಿಜಯವಿಠಲ ಜ -

ನಾರ್ಧನ ರಕ್ಷಣ ಅಬ್ಧಿನಿವಾಸ ll1ll


 ಮಟ್ಟತಾಳ 


ಒಂದು ದಿನದಲಜನು ಚಂದದಿಂದಲಿ ಆ 

ನಂದ ವೈಜಯಂತಿ ಎಂದೆಂಬೊ ಸಭೆಯಲ್ಲಿ 

ವೃಂದಾರಕ ಸಿದ್ಧಗಂಧರ್ವ ಸರ್ವ 

ಸಂದಣಿಯಲ್ಲಿ ನವನಂದನರ ಸಹಿತ 

ಅಂದು ವಾಲಗವಾಗೆ ಮಂದಹಾಸದಲಿನಾ 

ರಂದ ಮುನಿಪ ನಡೆತಂದನು ಎದುರಾಗಿ 

ಇಂದಿರಾಪತಿ ಗೋವಿಂದ ವಿಜಯವಿಠ -

 ಲಂ ದಾಗಿರುತಿರಲು ಬಂದನು ಪಾಡುತಲಿ 

ಬಂದು ಜನಾರ್ಧನನ ಮಂದರದಲಿ ನುಡಿಸಿ ll2ll


 ರೂಪಕತಾಳ 


ಬರಲು ನಾರದಮುನಿ ಪರಮೇಷ್ಟಿ ಆತ್ಮಜನ 

ನೆರವಾಗಿ ಬರುತಿಪ್ಪ ಹರಿಮೂರುತಿಯ ನೋಡಿ 

ಸರಸರನೆ ಎದ್ದು ನಿಂದರಲಾಗಿ ನವಪ್ರಜೆ 

ಶ್ವರರು ಹಾಸ್ಯವಮಾಡೆ ಹರಿದು ಶಾಪಿಸಿ ನೀವು 

ನರರಾಗಿ ಪುಟ್ಟಿ ಸಂಚರಿಸು ಎಂದೆನಲಾಗಿ 

ಮ[ರು]ಗಿ ತಮ್ಮೊಳಗೆ ತತ್ತರಿಸೀದವರಾಗ 

ಸುರಪಾಲ ವಿಜಯವಿಠಲ ಜನಾರ್ಧನನೆಂಬೊ 

ಸುರಮುನಿಯಾ ಕೊಂಡಾಡಿ ವರದಾರೀವಾರ್ತಿ ll3ll


 ಝಂಪೆತಾಳ 


ಕೇಳಿ ಕೌತುಕವೆಂದು ತಲೆದೂಗಿ ಹರಿಲೀಲೆಗೆ 

ಪೇಳಲಾರಳವೆ ಶೃತಿವಚನದಿಂದ 

ಭೂಲೋಕದಲಿ ಪರಶು ರಾಮಕ್ಷೇತ್ರ ಉಂಟು 

ವಾಲಯಾಲಿಪ್ಪ ಅಶ್ವತ್ಥದವಲ್ಲೀ 

ಮೇಲಾದ ಕಣ್ವಮುನಿ ಆಶ್ರೈಸಿ ಇರುತಿಪ್ಪ 

ಪೇಳುವೆನು ಮನಶುದ್ಧರಾಗಿ ಕೇಳಿ 

ಅಲಸಾ ಗೈಸದತಿ ಪೋಗಿ ನಿಮ್ಮಯ ಶಾಪ 

ಬೀಳೂ ಹಾಕುವದಕುಪಾಯವಂದೂ 

ಶ್ರೀಲೋಲ ವಿಜಯವಿಠಲ ಜನಾರ್ಧನನೆಂದು 

ಬೀಳುಕೊಟ್ಟನು ನವ ಪ್ರಜೇಸರಿಗೆ ll4ll


 ತ್ರಿವಿಡಿತಾಳ 


ನಾಋದ ಕೃಪೆಯಿಂದ ಭೈರವಾಸದಜನೀ 

ವಾರವ ಕೊಡಲಾದರ ಸಂಗಡದಲ್ಲೀ 

ಶರೀರ ಧರಿಸಿ ಬಂದರು ನಾರವಸನ 

ಭೋರಾನೆತಂದಿಲ್ಲಿ ಕೇಡಾದದಂದು ಮೊದಲು 

ಧಾರುಣಿ ಒಳಗೆ ವಲ್ಕಲ ಕ್ಷೇತ್ರವೆಂದಿದು 

ಕಾರಣವಾಯಿತು ಪಂಚಕ್ರೋಶಾ 

ಸಾರಸುಂದರ ವಿಜಯವಿಠಲ ಜನಾರ್ಧನ 

ಮೀರಿದ ದೈವದ ಮಾಯಾವಿನ್ನೆಂತುಂಟೊ ll5ll


 ಝಂಪೆತಾಳ 


ಒಂಭತ್ತುಮಂದಿ ಬ್ರಹ್ಮನ ಮಕ್ಕಳು ಬಂದು 

ಸಂಭ್ರಮದಲ್ಲಿ ಅಶ್ವತ್ಥವನ್ನೂ 

ಅಂಬಕಾದಿಂದಲ್ಲಿ ನೀಕ್ಷಿಸಲು ಸ್ವರ್ಣಮಯ 

ಅಂಬರಕೆ ತುಳುಕುತಿದೆ ಅಲ್ಲಿಗಲ್ಲೀ 

ಕೊಂಬಿಕೊಂಬಿ ಎಲೆಮೂಲಾಗ್ರ ಪರಿಯಂತ 

ತುಂಬಿಹರು ಸುರರಾದಿ ತೆರವಿಲ್ಲದೆ 

ಜಂಬುದ್ವೀಪದೊಳಗೆ ಇದಕೆಣೆ ಇಲ್ಲೆಂದು 

ಇಂಬು ಮಾಡಿದರದರ ಛಾಯದಲ್ಲೀ 

ಕಂಬುಧರ ವಿಜಯವಿಠಲ ಜನಾರ್ಧನ ಪರ 

ನೆಂಬ ಮುನಿಪನು ಬಂದ ಕುಂಭಿಣಿಸುರನಾಗಿ ll6ll


 ತ್ರಿವಿಡಿತಾಳ 


ಪ್ರಜೇಶ್ವರರಿಗೆ ಉಪದೇಶವ ತಿಳುಹಿದ 

ದ್ವಿಜನಾಗಿ ಬಂದ ನಾರದಮುನಿ ಅಂದೂ 

ದ್ವಿಜಗಮನನ ಬಳಿಗೆ ಪೋಗಿ ತುತಿಸಿ ಚಕ್ರ 

ನಿಜವಾಗಿ ಕಳುಹಿ ಚಕ್ರತೀರ್ಥವೆನಿಸಿದ 

ಭಜಿಸುತ್ತ ಮನದೊಳು ಹರಿಯ ಚರಣವನ್ನು 

ಅಜನ ಬಳಿಗೆಯೈದ ಭಾಗವತರಮಣಿ 

ತ್ರಿಜಗ ಮಧ್ಯದಲೊಂದು ಯಾಗ ಮಾಡುವುದಕ್ಕೆ 

ರುಜುವಾದ ನೆಲನೆನಗರುಹೆನಲು 

ಅಜನ ಮಾತನು ಕೇಳಿ ಕರವ ಜೋಡಿಸಿನಿಂದು 

ಸುಜನರಾಗ್ರಣಿ ಪೇಳಿದನಿದರ ಮಹಿಮಿಯಾ 

ಗಜವರದಾ ವಿಜಯವಿಠಲ ಶ್ರೀಜನಾರ್ಧನ 

ಯಜಮಾನನಾಗುವ ಮೇಧದಲ್ಲಿಗೆ ಬಂದೂ ll7ll


 ಅಟ್ಟತಾಳ 


ಹರುಷದಿಂದಲಿ ಬಂದು ಪರಮೇಷ್ಟಿಯಾಗವ 

ಸುರರಸಹಿತವಾಗಿ ಸರಿಯಿಲ್ಲವಧಾನಾ 

ಸರಿಯಾದೆ ಕೊಡುತಿರೆ ನಿರುತಾದಲ್ಲಿ ವೈಶ್ವಾ 

ನರಗೆ ವಖ್ಖಸವಾಗೆ ಪರಿಹಾರಾ ಕಾಣಾದೆ 

ಭರದಿಂದಲಿ ಅಗ್ನಿ ಹರಿಯಾ ಮೊರೆಯೋಗೆ 

ಕರುಣಾದಿಂದಲಿ ಕೇಳಿ ಹರಿಬಂದಾ ಬಾಲಾ ಭೂ -

ಸುರ ವೇಷವನು ತಾಳಿ ಇರಲದೆ ಕ್ಷುದಿ ಪರಿ 

ಹರಿಸೆಂದು ಗ್ರಾಸವಾ  ತರಿಸಿವಾದರಿಸಿ 

ಪರಮಸೋಜಿಗವೆಂದು ಸುರಜೇಷ್ಠ ತಲೆದೂಗಿ 

ಹರಿಮಾಯಾ ವಿಜಯವಿಠಲ ಜನಾರ್ಧನ 

ಕರುಣಿಯಾ ಮನದಲ್ಲಿ ಸ್ಮರಿಸಿ ಮನ್ನಿಸಿದ ll8ll


 ಆದಿತಾಳ 


ಎಲ್ಲೆ ಓದನರಾಸಿ ಎಲ್ಲೆ ನಾನಾಕರಾಸಿ 

ಎಲ್ಲೆ ಘೃತದ ಮಡುವು ಎಲ್ಲೆಲ್ಲಿ ಇದ್ದವೆಲ್ಲಾ 

ಅಲ್ಲಿಗಲ್ಲಿಗೆ ಬಯಲು ನಿಲ್ಲದಡಗಿದವು 

ಎಲ್ಲಿ ಅದ್ಭೂತವೆಂದು ತಲ್ಲಣಿಸಲು ಇತ್ತಲು 

ಬಲ್ಲಿದ ದೈವ ಕರದಲ್ಲಿ ಆ ಪೋಷಣಿಯಾ 

ನಿಲ್ಲದೆ ಪಿಡಿದು ಗ್ರಾಸಾ 

ಇಲ್ಲಾವೆಂದರೆ ನಾನು ಕೊಳ್ಳತಕ್ಕವನೆಂದು 

ಸೊಲ್ಲು ಪೇಳಾಲೆಂದು ಅಜನು 

ಮೆಲ್ಲಾನೆ ತುತಿಸಿ ಸಿರಿವಲ್ಲಭನ ಲೀಲೆ ತಿಳಿದು 

ನಿಲ್ಲಿಸಿದ ಯಾಗವನು ಇಲ್ಲಿನವ ಪ್ರಜೇಸನು 

ಪುಲ್ಲನಾಭವೊಲಿಸಿ ವೇಗದಲಿ ಮನುಜ ದೇಹಬಿಟ್ಟು 

ಸಲ್ಲಿದರು ಪೂರ್ವದಂತೆ ಎಲ್ಲರಿಂದ ಪೂಜೆ 

ಗೊಳ್ಳುತನ ವಳ್ಳಿತಿದು ಭಾಗೀರಥೀ 

ಉಳ್ಳ ತಾಮ್ರಪರ್ಣಿಸಲಿಲಾ 

ಎಲ್ಲಾ ಪ್ರಖ್ಯಾತವಾಗಿಪ್ಪ 

ಅಲ್ಲಿಗಲ್ಲಿಗೆ ಧರೆ ನರರೂ 

ಒಲ್ಲೆ ಎನದೇ ಇಂದು ಕ್ಷಾಯದಲ್ಲಿ ಮಿಂದು ಶುದ್ಧನಾಗೆ 

ಎಲ್ಲ ದೋಷಂಗಳು ಇರದೆ ತಲ್ಲಣಿಸಿ ಪೋಗುವುವು 

ಖುಲ್ಲರರಿ ಜನಾರ್ಧನ ವಿಜಯವಿಠಲರೇಯಾ 

ಎಳ್ಳಿನಿತು ಬಿಡದೆ ಸಾರೆ ಗೆಲ್ಲಿಸುವ ಶೋಕದಿಂದ ll9ll


 ಜತೆ 


ವಲ್ಕಲಾ ಕ್ಷೇತ್ರದಾ ವಾಸ ಜನಾರ್ಧನ 

ಬಲವಂತ ವಿಜಯವಿಠಲ ಪಾವಕಪಾಲಾ ll10ll

********