Showing posts with label ಸಂತರವರೆ ನೋಡಿರೈ ಕೈವಲ್ಯದ prasannavenkata. Show all posts
Showing posts with label ಸಂತರವರೆ ನೋಡಿರೈ ಕೈವಲ್ಯದ prasannavenkata. Show all posts

Monday, 18 November 2019

ಸಂತರವರೆ ನೋಡಿರೈ ಕೈವಲ್ಯದ ankita prasannavenkata

by ಪ್ರಸನ್ನವೆಂಕಟದಾಸರು
ಸಂತರವರೆ ನೋಡಿರೈ ಕೈವಲ್ಯದಸಂತರವರೆ ನೋಡಿರೈ ಪ.

ಸತ್ಯ ರಮೇಶನ ಸೃಷ್ಟಿಯೆ ಸತ್ಯಹತ್ತೆರಡೈದು ತತ್ವವೆ ಸತ್ಯಸತ್ಯಾತ್ಮೇಶರ ಭೇದವೆ ಸತ್ಯಸತ್ಯಾತ್ಮಕನ ಪದ ಸತ್ಯೆನುವ 1

ಹರಿಭಕ್ತರ ಕಂಡಪ್ಪುತ ನಿರುತಹರಿಸಲ್ಲಾಪ ಕಥಾಶ್ರಯ ಬಲಿದಹರಿಭೃತ್ಯರಿಗನ್ನೋದಕನೀವರುಹರಿಸಂಕೀರ್ತನೆ ಮನಮನೆಯವರು2

ಆನಂದಕೆ ಕವಲಿಲ್ಲದ ಸುಖದು:ಖಾನಂದವನನುಭವಿಸಿ ಬಿಡುವರುಆನಂದಮುನಿಯ ಮತಪ್ರಿಯನಿತ್ಯಆನಂದ ಪ್ರಸನ್ವೆಂಕಟಪತಿಯವರು 3
******