Showing posts with label ಳಳ- ಕನ್ನಡ ಗೀತೆ- ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ JOGADA SIRI BELAKINALLI TUNGEYA TENE. Show all posts
Showing posts with label ಳಳ- ಕನ್ನಡ ಗೀತೆ- ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ JOGADA SIRI BELAKINALLI TUNGEYA TENE. Show all posts

Monday, 27 December 2021

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ others JOGADA SIRI BELAKINALLI TUNGEYA TENE



 - ಕೆ. ಎಸ್. ನಿಸ್ಸಾರ್ ಅಹ್ಮೆದ್

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ

ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ


ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ

ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಬಿತ್ತಿಗಳಲಿ

ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ


ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ

ಸದ್ವಿಕಾಶ ಶೀಲ ನುಡಿಯ ಲೋಕಾಮೃತ ಸೀಮೆಯೆ

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ

***

- K.S. Nissar Ahmed

jOgada siri beLakinalli tungeya tene baLukinalli

sahyAdriya lOhadadira uttungada nilukinalli

nitya haridvarNa vanada tEga gandha tarugaLalli

nityOtsava, tAye nityOtsava ninage


itihAsada himadallina simhAsana mAleyalli

gata sAhasa sArutiruva shAsanagaLa sAlinalli

Ole gariya sirigaLalli, dEgulagaLa bittigaLali

nityOtsava, tAye nityOtsava ninage


halavennada hirimeye, kulavennada garimeye

sadvikAsha sheela nuDiya lOkAmruta seemeye

ee vatsara nirmatsara manadudAra mahimeye

nityOtsava, tAye nityOtsava ninage

***