- ಕೆ. ಎಸ್. ನಿಸ್ಸಾರ್ ಅಹ್ಮೆದ್
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ
ಓಲೆ ಗರಿಯ ಸಿರಿಗಳಲ್ಲಿ, ದೇಗುಲಗಳ ಬಿತ್ತಿಗಳಲಿ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ
ಸದ್ವಿಕಾಶ ಶೀಲ ನುಡಿಯ ಲೋಕಾಮೃತ ಸೀಮೆಯೆ
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
ನಿತ್ಯೋತ್ಸವ, ತಾಯೆ ನಿತ್ಯೋತ್ಸವ ನಿನಗೆ
***
- K.S. Nissar Ahmed
jOgada siri beLakinalli tungeya tene baLukinalli
sahyAdriya lOhadadira uttungada nilukinalli
nitya haridvarNa vanada tEga gandha tarugaLalli
nityOtsava, tAye nityOtsava ninage
itihAsada himadallina simhAsana mAleyalli
gata sAhasa sArutiruva shAsanagaLa sAlinalli
Ole gariya sirigaLalli, dEgulagaLa bittigaLali
nityOtsava, tAye nityOtsava ninage
halavennada hirimeye, kulavennada garimeye
sadvikAsha sheela nuDiya lOkAmruta seemeye
ee vatsara nirmatsara manadudAra mahimeye
nityOtsava, tAye nityOtsava ninage
***
Favourite song 👍
ReplyDelete