Showing posts with label ಶಂಭು ಶಂಕರನೆ ನಿನಗೊಂದಿಸಿ ಬೇಡುವೆ kalimardhanakrishna. Show all posts
Showing posts with label ಶಂಭು ಶಂಕರನೆ ನಿನಗೊಂದಿಸಿ ಬೇಡುವೆ kalimardhanakrishna. Show all posts

Monday, 2 August 2021

ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ankita kalimardhanakrishna

ಶಂಭು ಶಂಕರನೆ ನಿನಗೊಂದಿಸಿ ಬೇಡುವೆ ಬಿಂಬದಲ್ಲಿರುವ

ಮನ ಸ್ವಾಮಿಯ ತೋರೈ ಪ.


ರುದ್ರ ದೇವನೆ ಮನಶುದ್ಧಿಯ ನೀ ಮಾಡಿ

ಶ್ರದ್ದೆಯಿಂದಲಿ ಅನಿರುದ್ಧನ ತೋರೈ 1


ಸಿದ್ದಗುಣಗಳೊಡೆಯ ಉದ್ದರಿಸೆನ್ನ

ಹದ್ದುವಾಹನ ಪ್ರದ್ಯುಮ್ನನ ತೋರೈ 2


ಶಂಕರನೇ ನಿನ್ನ ಕಿಂಕರಳನೆ ಮಾಡಿ

ಮಂಕುಬುದ್ದಿಯ ಬಿಡಿಸಿ ಸಂಕರುಷಣನ ತೋರೈ 3


ವಾಸುದೇವನಿಗೆ ಶಿಶುವಿನ ಶಿಶು ನೀನಾಗಿ

ಹುಸಿಯ ಮಾಡದೆ ವಾಸುದೇವನ ತೋರೈ 4


ಪಾರ್ವತಿ ಪತಿಹರ ಪಾಪವ ಕಳೆಸೆನೆಗೆ

ಪಾರ್ಥನ ಸಖನ ನಾರಾಯಣನ ತೋರೈ 5


ನಂದಿವಾಹನ ನಿನಗೊಂದಿಸಿ ಬೇಡುವೆ

ಬಂಧನ ಬಿಡಿಸಿ ಗೋವಿಂದನ ತೋರೈ 6


ರಮಾವಲ್ಲಭ ವಿಠಲ ನಾಮವ ಅನುಗಾಲ

ನುಡಿವಂತೆ ವರಗಳ ನೀ ನೀಡೈ 7

****