Showing posts with label ಮತಿಗೆಟ್ಟು ಕಾಲವ ಕಳೆಯಬೇಡ ಸದ್ಗತಿ ಕೊಡುವ ಹರಿಯ purandara vittala. Show all posts
Showing posts with label ಮತಿಗೆಟ್ಟು ಕಾಲವ ಕಳೆಯಬೇಡ ಸದ್ಗತಿ ಕೊಡುವ ಹರಿಯ purandara vittala. Show all posts

Thursday, 5 December 2019

ಮತಿಗೆಟ್ಟು ಕಾಲವ ಕಳೆಯಬೇಡ ಸದ್ಗತಿ ಕೊಡುವ ಹರಿಯ purandara vittala

ರಾಗ ಪೀಲು ಏಕ ತಾಳ 

ಮತಿಗೆಟ್ಟು ಕಾಲವ ಕಳೆಯಬೇಡ ಸ-
ದ್ಗತಿ ಕೊಡುವ ಹರಿಯ ನಂಬೆಲೊ ಮೂಢ ||ಪ||
ಕೋತಿಯಂತೆ ಕುಣಿಕುಣಿದಾಡಬೇಡ ಸು-
ನೀತಿ ಮಾರ್ಗವ ಪಿಡಿಯಲೊ ಗಾಢ ||

ಹಾಳು ಕೇರಿಯೊಳು ತಿರುಗುವ ಹಂದಿಯಂತೆ, ನೀ
ಬಳಲುತ್ತೆ ನಾನಾ ಜನ್ಮವೆತ್ತಿ ಬಂದೆ
ಬಾಳುವ ಕಾಲಕ್ಕೆ ಮದವೇರಿ ನಿಂದೆ, ಮುಂದೆ
ಮೂಳ ಮುಪ್ಪಿನಲ್ಲಿ ವಿಚಾರ ಪೊಂದಿ ||

ಮಡದಿ ಮಕ್ಕಳ ಪ್ರಪಂಚಕ್ಕಾಗಿ, ದುಡಿ
ದುಡಿದು ಹಾಕಿದ್ಯೊ ಮುದಿಕೋಣನಾಗಿ
ಮಡಿದು ಪೋಪಾಗ ಯಾರಿಲ್ಲವಾಗಿ, ಇನ್ನು
ದೃಢದಿ ನಿನ್ನೊಳು ನೀನು ತಿಳಿಯೊ ಗೂಗೆ ||

ರಾಯರೇರೋದು ಮದಗಜವಂತೆ, ಮತ್ತೆ
ಆಯದಿ ನಡೆಯೋದು ಬಾಳೆ ಸುಳಿಯಂತೆ
ಹೇಯ ಸಂಸಾರ ಸ್ಥಿರವಲ್ಲವಂತೆ, ನಮ್ಮ
ಜೀಯ ಪುರಂದರವಿಠಲ ದಯಮಾಡನಂತೆ ||
***

pallavi

matikeTTu kAlava kaLayabEDa sadgati koDuva hariya nambalo mUDha

anupallavi

kOtiyante kuNidADa sunIti mArgava piDiyalo gADa

caraNam 1

hALu kEriyoLu tiruguva handiyante nI baLalutte nAn janmavetti bande
bALuva kAlakke madavEri ninde munde mULa muppinalli vicAra pondi

caraNam 2

maDadi makkaLa prapancakkAgi duDi duDidu hAkidyo mudikONanAgi
maDidu pOpAga yArillavAgi innu drDhadi ninnoLu nInu tiLiyo gUge

caraNam 3

rAyarErOdu madagajavante matte Ayadi naDeyOdu bALe suLiyante
hEya sAmsAra sthiravallavante namma jIya purandara viTTalala daya mADanante
***