ರಾಮ ರಾಮ ರಾಮೆನ್ನಿರೋ, ಇಂಥಾ
ಸ್ವಾಮಿಯ ನಾಮವ ಮರೆಯದಿರೊ ||ಪ ||
ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸುಗಳೈದು ಮಂದಿ
ಡಂಭಕತನದಿಂದ ಕಾಯುವ ಜೀವವ
ನಂಬಿ ನೆಚ್ಚಿ ನೀವು ಕೆಡಬೇಡಿರೊ ||
ನೆಲೆ ಇಲ್ಲದ ಕಾಯ ಎಲುವಿನ ಹಂದರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳುಳ್ಳ
ಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ ||
ಹರಿ ಬ್ರಹ್ಮ ಸುರರಿಗೆ ವಂದ್ಯನು ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ ||
***ರಾಗ ಮಧ್ಯಮಾವತಿ ಅಟ ತಾಳ (raga, taala may differ in audio)
ತಾಳ : ಆದಿ ರಾಗ : ಚಾರುಕೇಶಿRaama raama raama enniro inthasvamiya namava mareyadiro ||pa||
Tumbida pattanakombattu bagilu
Sambramadarasaru aidu mandi
Dambakatanadinda tiruguva kayava
Nambi necci nivu kedabediro ||1||
Nele illada kaya eluvina panjara
Balidu suttida charmada hodike
Malamutrangalu kivu krimigalinda
Barita dehava necchi kedabediro ||2||
Hari brahma surarinda vandita agippa
Hari sarvottamanendenniro
Purandaravithalana charanava bajisiro
Durita bayagalinda duragiro ||3||
***
pallavi
rAma rAmennirO inthA svAmiya nAmava mareyadiro
caraNam 1
tumbida paTTaNakombhattu bhAgilu sambhramadara sukhaLaidi mandi
Dambhakadanadinda kAyuva jIvana nambi necci nIvu keDa bEDiro
caraNam 2
nele illada kAya eluvina handara balidu suttida carmada hodike
mala mUtrangaLu kIvu krimigaLuLLa holasu togala mecci keDa bEDiro
caraNam 3
hari brahma surarige vandyanu Agippa hari sarvOttmanendenniro
purandara viTTalana caraNava bhajisiro durita bhayagaLinda dUrAgiro
***
ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದಿರೋ ಪ
ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸರು ಐದು ಮಂದಿ
ಡಂಭಕತನದಿಂದ ತಿರುಗುವ ಕಾಯವ
ನಂಬಿ ನೆಚ್ಚಿ ನೀವು ಕೆಡಬೇಡಿರೊ ೧
ನೆಲೆ ಇಲ್ಲದ ಕಾಯ ಎಲುವಿನ ಪಂಜರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ
ಭರಿತ ದೇಹವ ನೆಚ್ಚಿ ಕೆಡಬೇಡಿರೊ ೨
ಹರಿ ಬ್ರಹ್ಮ ಸುರರಿಂದ ವಂದಿತ ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ ೩
*****