Showing posts with label ಅವರೇ ಕಾಯ ಬೇಕು ಕಾಲದಿ ಅವರೇ ಕಾಯ ಬೇಕು gururama vittala AVARE KAAYA BEKU KAALADI AVARE KAAYA BEKU. Show all posts
Showing posts with label ಅವರೇ ಕಾಯ ಬೇಕು ಕಾಲದಿ ಅವರೇ ಕಾಯ ಬೇಕು gururama vittala AVARE KAAYA BEKU KAALADI AVARE KAAYA BEKU. Show all posts

Thursday, 4 November 2021

ಅವರೇ ಕಾಯ ಬೇಕು ಕಾಲದಿ ಅವರೇ ಕಾಯ ಬೇಕು ankita gururama vittala AVARE KAAYA BEKU KAALADI AVARE KAAYA BEKU

by ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ಅವರೇ ಕಾಯ ಬೇಕು ಕಾಲದಿ
ಅವರೇ ಕಾಯ ಬೇಕು ||ಪ||

ಅವರೆ ಬಹುರುಚಿಯವರೆ ಸಂಪದ
ಅವರಿಂದಲಿ ಮೋಕ್ಷಾದಿ ಸಾಧನವು ||ಅ||

ಯುಕ್ತರಾಗಿ ಇರುವ ಜನರಿಗೆ
ಭುಕ್ತಿಯನು ಕೊಡುವ
ಭಕ್ತರಿಗೆಲ್ಲಾ ಬಾಯ್ಸವಿಯಾದ
ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧||

ಇವರೆಲ್ಲ ಅಳೆದು ಬಿತ್ತಿ
ವಿವರವಾಗಿ ಅಳೆದು
ತವಕದಿ ಮೂಟೆಯ ಕಟ್ಟಿಟ್ಟಿದ್ದರೆ
ಜವನವರೆಳೆಯುವ ಕಾಲಕ್ಕೊದಗುತ ||೨||

ಹಿತರಾಗಿ ಅವರೆ ಮಾತಾ-
ಪಿತರಾಗೀ ಅವರೆ
ಗತಿದಾಯಕರಾಗಿ ಅವರೆ ಭೂ-
ಸುತೆ ಗುರುರಾಮವಿಠಲರೀರ್ವರು ||೩||
***