Showing posts with label ಕೃಷ್ಣ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟಿ ಮಿಸುಕ mahipati KRISHNA ENIKYAAKAIYYA NAMMA KOODA TUTI MISUKA. Show all posts
Showing posts with label ಕೃಷ್ಣ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟಿ ಮಿಸುಕ mahipati KRISHNA ENIKYAAKAIYYA NAMMA KOODA TUTI MISUKA. Show all posts

Wednesday, 1 December 2021

ಕೃಷ್ಣ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟಿ ಮಿಸುಕ ankita mahipati KRISHNA ENIKYAAKAIYYA NAMMA KOODA TUTI MISUKA



by ಕಾಖಂಡಕಿ ಮಹಿಪತಿರಾಯರು

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ 
ತುಟಿ ಮಿಸುಕಬಾರದು ನೋಡಬ್ಯಾಡ 
ಗುಟ್ಟು ಒಡೆದ ಮ್ಯಾಲುಳಿಯದು ಗೂಢ 
ಇಷ್ಟರ ಮೇಲೆ ತಿಳಿಯದ ನಾ ಮೂಢ               ।।೧।।

ಅಂದು ಏನಾಗಿತ್ತೈಯ್ಯ ನಿಮ್ಮ ಬುದ್ಧಿ
ಬಂದು ಗೊಲ್ಲರೊಡನೆ ಕೊಡ್ಯಾಕಿದ್ದಿ 
ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ         ।।೨।।

ಕುಬಜ ಕೂಡಿಕೊಂಬಾಗ ನೋಡಲಿಲ್ಲೆ 
ನಿಜಪದಕ ಯೋಗ್ಯಳ ಮಾಡಲಿಲ್ಲೆ 
ಅಜಮಿಳನೆಷ್ಟೆಂದು ಅರಿಯಲಿಲ್ಲೆ 
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ                ।।೩।।

ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು 
ನಿಮ್ಮ ಮಾತು ಒಡಿಯದು ಉದ್ದಂಡು 
ಇಮ್ಮನಾಗದಲ್ಹಿಂದ ಮನಗಂಡು 
ಬ್ರಹ್ಮಾನಂದ ಕೊಂಡಾಡುವೆ ಘನನುಂಡು         ।।೪।।

ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ 
ಇಂದು ನಾ ಕೊಡುವದೇನು ಹೇಳಯ್ಯ 
ಕಂಡ ಮಹಿಪತಿ ನಾ ನಿಮ್ಮ ನಿಶ್ಚಯ 
ಎಂದು ಬಿಡದೆ ಸಲಹೊ ನೀ ನಮ್ಮಯ್ಯ            ।।೫।।
***

Krushna enikyakaiyya namma kuda
Tuti misukabaradu nodabyada
Guttu odeda myaluliyadu gudha
Ishtara mele tiliyada na mudha ||1||

Andu enagittaiyya nimma buddhi
Bandu gollarodane kodyakiddi
Sandhisyavaruccishtavemdu ni meddi
Indu byare nodalikke marada suddi ||2||

Kubaja kudikombaga nodalille
Nijapadaka yogyala madalille
Ajamilaneshtendu ariyalille
Sojigellanu nimmadu na balle ||3||

Summanirabekenna ni kudikondu
Nimma matu odiyadu uddandu
Immanagadalhimda managandu
Brahmananda komdaduve gananundu ||4||

Hinde baktarenu tam kottarayya
Indu na koduvadenu helayya
Kanda mahipati na nimma nischaya
Endu bidade salaho ni nammayya ||5||
***

ಕೃಷ್ಣಾ ಎಣಿಕ್ಯಾಕೈಯ್ಯ ನಮ್ಮ ಕೂಡ ತುಟ್ಟಿ ಮಿಸುಕಬಾರದು 
ನೋಡಬ್ಯಾಡ ಇಷ್ಟರಮೇಲೆ ತಿಳಿಯದ ನಾ ಮೂಢ 1 
ಅಂದು ಏನಾಗಿತ್ತೈಯ್ಯ ನಿಮ್ಮ ಬುಧ್ದಿ ಬಂದು ಗೊಲ್ಲರೊಡನೆ 
ಕೂಡ್ಯಾಕಿದ್ದಿ ಸಂಧಿಸ್ಯವರುಚ್ಚಿಷ್ಟವೆಂದು ನೀ ಮೆದ್ದಿ 
ಇಂದು ಬ್ಯಾರೆ ನೋಡಲಿಕ್ಕೆ ಮರದ ಸುದ್ದಿ 2 

ಕುಬ್ಜೆ ಕೂಡಿಕೊಂಬಾಗ ನೋಡಲಿಲ್ಲಿ ನಿಜಪದಕ 
ಯೋಗ್ಯಳ ಮಾಡಲಿಲ್ಲಿ ಅಜಮಿಳನೆಷ್ಟೆಂದು ಅರಿಯಲಿಲ್ಲಿ 
ಸೋಜಿಗೆಲ್ಲಾನು ನಿಮ್ಮದು ನಾ ಬಲ್ಲೆ 3 

ಸುಮ್ಮನಿರಬೇಕೆನ್ನ ನೀ ಕೂಡಿಕೊಂಡು ನಿಮ್ಮ ಮಾತು ಒಡಿಯದು 
ಉದ್ದಂಡು ಇಮ್ಮನಾಗದಲ್ಲಿಂದ ಮನಗಂಡು 
ಬ್ರಹ್ಮಾನಂದ ಕೊಂಡಾಡುವೆ ಘನನುಂಡು 4 

ಹಿಂದೆ ಭಕ್ತರೇನು ತಾಂ ಕೊಟ್ಟರಯ್ಯ ಇಂದು ನಾ 
ಕೊಡುವದೇನು ಹೇಳಯ್ಯ ಕಂದ ಮಹಿಪತಿ ನಾ 
ನಿಮ್ಮ ನಿಶ್ಚಯ ಎಂದು ಬಿಡದೆ ಸಲಹೊ ನೀ ನಮ್ಮಯ್ಯ 5
*****