Showing posts with label ಮಂತ್ರಾಲಯ ಚಂದ್ರೋದಯ ಪರಿಪಾಲಯ ಸದಯ raghunayaka. Show all posts
Showing posts with label ಮಂತ್ರಾಲಯ ಚಂದ್ರೋದಯ ಪರಿಪಾಲಯ ಸದಯ raghunayaka. Show all posts

Monday, 6 September 2021

ಮಂತ್ರಾಲಯ ಚಂದ್ರೋದಯ ಪರಿಪಾಲಯ ಸದಯ ankita raghunayaka

 ankita ರಘುನಾಯಕ/ರಘುರಾಮ (ಅನೇಕ)

ರಾಗ: ಮಾಂಡ್  ತಾಳ: ರೂಪಕ


ಮಂತ್ರಾಲಯ ಚಂದ್ರೋದಯ ಪರಿಪಾಲಯ ಸದಯ 


ಮಂತ್ರೇಕ್ಷಣ ಗುಣಲಕ್ಷಣ ಖಳಶಿಕ್ಷಣ ಕೃಪಯಾ  ಅ. ಪ


ಚರಣಾನತ ಜನಪೋಷಕ ಬೃಂದಾವನನಿಲಯ

ಕರುಣಾವನ ಯತಿಭೂಷಣ ಮೃದುಮಂದರ ಹೃದಯ

ಗುರುಪಾವನ ಹರಿಪೂಜನ ವರದಕರ ಪ್ರೀಯ

ಪರವೋತ್ತಮ ಜಗಮೋಹನ ಗುಣಪೂರಣ ರಾಯ  1

ತುಂಗಾನದಿ ತೀರಾಶ್ರಿತ ರೋಗಾಹರಚತುರ

ಮಂಗಳಕರ ದಿವ್ಯಾಂಕುರ ವೈಷ್ಣವ ಕುಲ ಪ್ರಖರ

ರಘುನಾಯಕ ವರಪೂಜಕ ಹರಿಸೇವಾನಿರತ

ಅಘನಾಶನ ಜನರಕ್ಷಣ ಕೃಪಯಾಪರ ಚರಿತ  2

ಕಾಷಾಯ ದುಕೂಲಾವೃತ ರಾಮಾಮೃತ ಪ್ರೀತ

ಭೇಷಜ ವರ ಮಹಿಮಾನ್ವಿತ ಆನತಕುಲ ದಾತ

ದ್ವೇಷಾವನ ನಾಶಾನಲ ವೀಣಾಧೃತ ವಿನುತ

ತೋಷಾನನ ಮಂದಸ್ಮಿತ ಮುನಿಮಾನಸ ಭರಿತ  3

***