ankita ಲಕುಮೀಶ
ರಾಗ: [ಮುಖಾರಿ] ತಾಳ: [ತ್ರಿಪುಟ]
ಪರಿಮಳಾರ್ಯರ ದಿವ್ಯ ಚರಣ ಭಜಿಸೋ ನಿತ್ಯ
ದುರಿತಗಳು ಪೋಪವು ಪ
ಹರಿಗೆ ಪ್ರಿಯರು ರಾಘವೇಂದ್ರರು ಶರಣಜನರ
ಕರಪಿಡಿದು ಕರುಣದಿಂದಲಿ ವರಗಳೀಯುತ
ನಿರುತ ಮಂತ್ರಗೃಹದಿ ಮೆರೆಯುವ ಅ ಪ
ದಿತಿಜಾವಂಶದೊಳು ಪ್ರಥಮಯುಗದಿ ಜನಿಸಿ
ಚತುರ ಪ್ರಹ್ಲಾದನೆನಿಸಿ ರತಿಪತಿಪಿತನಂಘ್ರಿ ಸ್ತುತಿಸಲು
ಪಿತನು ಸಿಟ್ಟಲಿ ಖಡ್ಗತೋರಿ
ದೈತ್ಯಕುಲಹಗೆ ಹರಿಯ ತೋರೆನೆ
ರತುನಸ್ತಂಭದಿ ಹರಿಯ ತೋರಿದ 1
ಕಾಷಾಯವಸನದಿ ಭಾಸ್ಕರ ತೇಜದಿ
ವ್ಯಾಸರಾಜಾಎಂದೆನಿಸಿ ಶ್ರೀಶನಂಘ್ರಿಯ ಬಿಡದೆ ಪೊಗಳುತ
ದಾಸರೆನಿಪ ಪುರಂದರಾರ್ಯಗೆ
ಸೂಸಿ ಹರಿಯುವ ಜ್ಞಾನ ಭಕ್ತಿಯೋಳ್
ಮೇಶನೆ ಪರನೆಂದು ತಿಳಿಸಿದ 2
ದೃಢಮನದಲಿ ತನ್ನ ಬಿಡದೆ ಸೇವಿಪರಿಗೆ
ಕೊಡುವ ಸಕಲೇಷ್ಟಗಳ ತಡಮಾಡದೆ
ಒಡೆಯ ಶ್ರೀ ಲಕುಮೀಶ ದೇವನ ಅಡಿಗಳಾರ್ಚನೆ ಸತತ
ಮಾಡುತ ಪಡೆದ ಕೀರ್ತಿಯ ಪೊಡವಿಯೊಳು ತಾ
ಒಡನೆ ಪರಿಮಳ ರಚಿಸಿದಾ ಗುರು 3
***