raga maand
ರಾಮನಾಮ ರತ್ನಹಾರ ದೊರಕಿತು ಎನಗೆ ||ಪ||
ಪೂರ್ವಪುಣ್ಯದ ಫಲಕೆ ||ಅ||
ಮಚ್ಛನೆಂಬೊ ಮಾಣಿಕ್ಯದ ಹರಳು ಕೂರ್ಮನೆಂಬೊ ಕುಸುರಿಗಳು ವರಹನೆಂಬೊ ಹೊಸ ಮೋಹನದ ಚಿನ್ನ ನರಹರಿಯೆಂಬೊ ನಾಮದ ಸರಮುತ್ತು ||
ವಾಮನನೆಂಬೊ ಒಲಿವ ಏಕಾವಳಿಯು ಪರಶುರಾಮನೆಂಬೊ ಪಚ್ಚೆಯ ಹರಳು ಕೃಷ್ಣನೆಂಬೊ ಕೀಲುಗಳು ಅತಿ ಕುಶಲದಿಂದಲಿತ್ತು ||
ಬೌದ್ಧನೆಂಬೊ ಅತಳಗಳ ಬಿಗಿದಿತ್ತು ಬಹು ಬಗಿದಂತಿತ್ತು ಕಲ್ಕಿಯೆಂಬೊ ಆ ಕುಣಿಕೆಯ ಹಚ್ಚಿಟ್ಟು ಪುರಂದರವಿಠಲ ನಾಮದ ಸರಮುತ್ತು ಸೌಭಾಗ್ಯ ನಿಗಳಿಲ್ಲಿತ್ತು ||
***
ರಾಗ ಕಾಂಭೋಜ ಅಟತಾಳ