Showing posts with label ಅಭಿಮಾನವೇಕೆ ಸ್ತ್ರೀಯರಲ್ಲಿ purandara vittala. Show all posts
Showing posts with label ಅಭಿಮಾನವೇಕೆ ಸ್ತ್ರೀಯರಲ್ಲಿ purandara vittala. Show all posts

Wednesday 4 December 2019

ಅಭಿಮಾನವೇಕೆ ಸ್ತ್ರೀಯರಲ್ಲಿ purandara vittala

ರಾಗ ಕೇದಾರಗೌಳ. ಮಟ್ಟೆ ತಾಳ

ಅಭಿಮಾನವೇಕೆ ಸ್ತ್ರೀಯರಲ್ಲಿ ||ಪ||
ಭಂಡತನ ಮಾಡೋರು ತುಂಡು ಮುಂಡೇರು ||ಅ||

ಒಡೆತನ ಬರುವಾಗ ತನ್ನ ಪತಿಯನು ಕಂಡು
ಚೆಲುವ ಚೆನ್ನಿಗನೆಂದು ಪೊಗಳುವರೊ
ಬಡತನವು ಬಂದು ತಾ ಕಾಡುವಾ ವೇಳೆಯಲಿ
ಮುದಿಯನ ಕೈ ಪಿಡಿದು ಕೆಟ್ಟನೆಂಬೋರೊ ||

ಅರುಣ ಉದಯದಲೆದ್ದು ಮನೆ ಮನೆಗಳನೆ ತಿರುಗಿ
ಮನದಲ್ಲಿ ಮನೆವಾರ್ತೆ ಸೃಜಿಸುವರೊ
ಎದೆಯ ಮೇಲಿನ ಸೆರಗು ಕಡಿವಾಣದಂತ್ಹಾಕಿ
ದುಡುಕುತನ ಮಾಡೋರು ತುರುಕ ಮುಂಡೇರು ||

ಈ ಮನೆಯ ಜಗಳವನು ಆ ಮನೆಗೆ ಪೇಳಿ
ಆ ಮನೆಯ ಜಗಳವನು ಈ ಮನೆಗೆ ತಂದು
ಅವರಿವರು ಹೊಡೆದಾಡಿ ಕಾದುತಿಹ ವೇಳೆಯಲಿ
ಅರಿಯದಂತಿಹರು ಅಲ್ಪ ಮುಂಡೇರು ||

ಉದಯಕಾಲದಲೆದ್ದು ಹರಿಯ ಸ್ಮರಣೆಯ ಮಾಡಿ
ಪರಲೋಕ ಸಾಧನವ ಪಡೆದುಕೊಳ್ಳಿರೆ
ಪರಮ ಪುರುಷ ನಮ್ಮ ಪುರಂದರವಿಠಲನ್ನ
ಮರೆಯದೆ ಭಜಿಸಿರೆ ಮೂಢ ಮುಂಡೇರಾ||
***


pallavi

abhimAnavEke strIyaralli

anupallavi

bhaNDatana mADOru tuNDu muNDEru

caraNam 1

oDetana baruvAga tanna patiyana kaNDu celuva cenniganendu pogaLuvaro
baDatanavu bandu tA kANuvA vELeyali mudiyana kai piDidu keTTanembOro

caraNam 2

aruNa udayadaleddu mane manegaLane tirugi manadalli mane vArte shrgisuvaro
edeya mElina seragu kaDivANadanthAgi duDukatana mADOru turuka muNDEru

caraNam 3

I maneya jagaLavanu A manege pELi A maneya jagaLavanu I manege tandu
avarivaru hoDedADi kADutiha vELeyali ariyadantiharu alpa muNDEru

caraNam 4

udaya kAladaleddu hariya smaraNeya mADi paralOka sAdhanava paDakoLLire
parama puruSa namma purandara viTTalanna mareyade bhajisire mUDha muNDErA
***