Showing posts with label ಸ್ಮರಿಸಿ ಸೇವಿಸಿ ವೆಂಕಟರಾಯದಾಸರ vijayaramachandra vittala. Show all posts
Showing posts with label ಸ್ಮರಿಸಿ ಸೇವಿಸಿ ವೆಂಕಟರಾಯದಾಸರ vijayaramachandra vittala. Show all posts

Friday, 6 August 2021

ಸ್ಮರಿಸಿ ಸೇವಿಸಿ ವೆಂಕಟರಾಯದಾಸರ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಸ್ಮರಿಸಿ ಸೇವಿಸಿ ವೆಂಕಟರಾಯದಾಸರ ಪ


ದುರಿತ ಹರಿಸಿ ಪೊರೆವ ನಮ್ಮ ಪ್ರತಿ ವಾಸರ ಅ.ಪ


ನೆನೆದ ಮಾತ್ರಕೆ ನಮ್ಮ ಪರಮ ಗುರುಗಳ

ಮನದಿ ಅನುದಿನ ಪುಷ್ಟಿ ಕರೆವ ವರಗಳ 1


ಧ್ಯಾನಮಾಡಲು ಸುಜ್ಞಾನ ಪಾಲಿಸಿ

ತಾನೆ ಒಲಿವನು ಕರುಣಿ ಇದನೆ ಲಾಲಿಸಿ 2


ಕುಂಭಕೋಣದಿ ವಾಸವನ್ನೆ ಮಾಡುತ

ಡಂಭ ವೇಷವ ತ್ಯಜಿಸಿ ಹರಿಯ ಪಾಡುತ 3


ಕ್ಷೇತ್ರ ಕ್ಷೇತ್ರವ ಚರಿಸಿ ಬರುತ ಅಲ್ಲಿಹ

ಆರ್ತ ಜನರನು ನೋಡಿ ಪೊರೆವ ಅನುದಿನ 4


ಸುಲಭ ಶ್ರೀಗುರು ವಿಜಯರಾಮಚಂದಿರವಿ

ಠಲ ಒಲಿವನು ಭವಾಟವಿಯ ತರಿವನು 5

***