Showing posts with label ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ vijaya vittala. Show all posts
Showing posts with label ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ vijaya vittala. Show all posts

Thursday, 17 October 2019

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ ankita vijaya vittala

ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ ||pa||

ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ ||1||

ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ ||2||

ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |
ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯ
ವಿಠ್ಠಲನಲ್ಲಿಕೌಂಶಿಕದವನ ಮಾಡು||3||
***

Saradambike nitya sarada kodu enage |
Saruve na ninna ||pa||

Pundarika nayane pundarikana rani
Pundarikagamane | pundarika carmambara |
Pundarikanathanute pundarikave namage ||1||

Suci sarirale enna Suciya maduva I |
Suciyolage ninna kirti suciyagi manadalli |
Suci jana pelutide | Suci margavane torise ||2||

Kaunsika vaniye kaunsika bimbasadane |
Kaunsikaveni karuni | kaunsika vijaya
Viththalanallikaunsikadavana madu||3||
***

ವಿಜಯದಾಸ
ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ ಪ

ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ 1

ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ 2

ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |

ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು3
***********