Showing posts with label ಹೀಗೆ ಮಾಡಬೇಕೋ ವಿಠಲ ತಂದೆ purandara vittala. Show all posts
Showing posts with label ಹೀಗೆ ಮಾಡಬೇಕೋ ವಿಠಲ ತಂದೆ purandara vittala. Show all posts

Saturday, 7 December 2019

ಹೀಗೆ ಮಾಡಬೇಕೋ ವಿಠಲ ತಂದೆ purandara vittala

ಪುರಂದರದಾಸರು
ಹೀಗೆ ಮಾಡಬೇಕೋ ವಿಠಲ ತಂದೆ ಹೀಗೆ ಮಾಡಬೇಕೋ ಪ

ಹೇಗಾದರು ದುರಿತಗಳೆನ್ನ ಕಾಡದಹಾಗೆ ಮಾಡ ಬೇಕೋ ಅ.ಪ

ಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮಮುಂದೆ ನಾ ತಾಯ ಉದರದಲಿ ಜನಿಸದಹಾಗೆ ಮಡಬೇಕೋ ವಿಠಲ ತಂದೆ 1

ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆಹೀನ ಮಾನವರಿಗೆ ನಾನು ಕೈಯಾನದಹಾಗೆ ಮಾಡಬೇಕೋ - ವಿಠಲ ತಂದೆ 2

ಕರುಣಿಪುರಂದರವಿಠಲ ತಂದೆನೆರೆನಂಬಿದೆ ನಿನ್ನಶರಣ ರಕ್ಷಕನೆಂಬ ಬಿರುದು ಬೇಕಾದರೆಹೀಗೆ ಮಾಡಬೇಕೋ - ವಿಠಲ ತಂದೆ 3
********