Showing posts with label ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲ pranesha vittala. Show all posts
Showing posts with label ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲ pranesha vittala. Show all posts

Monday, 11 November 2019

ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲ ankita pranesha vittala

by ಪ್ರಾಣೇಶದಾಸರು
ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲಜನುತಿಪೆಪ್ರತಿ||ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪ

ಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕರಿಪುಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||ಇಂದ್ರನಿರ್ಜರವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ)ಮಂದಕರುಣೆ 1

ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆಕ್ಲೇಶಹರಿಸೆ |ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |ದುರುಳಮತಿ ಪರಿಹರಿಸಿತವಕಹರಿ-ಗೆರಗೊ ಮನ ಕೊಡುಪರಮಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |ಉರು ಪರಾಕ್ರಮೆಪರತರಳೆ ಸದಾಪೊರೆಯೆ ಬಿಡದಲೆಕರಮುಗಿವೆ 2

ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-ಹಾನುಭಾವರ ಸಂಗ ಪಾಲಿಸೇ ||ಮಾನಿನೀ ಕುಲಮೌಳಿಮಣಿಚಂ |ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ 3
********