Showing posts with label ಬಿನ್ನೈಸಲೇನಿನ್ನು ಎನ್ನ ಗುರುವೇ ನಿಮ್ಮ ನಿತ್ಯಾನಂದನಿರುವ gopalakrishna vittala. Show all posts
Showing posts with label ಬಿನ್ನೈಸಲೇನಿನ್ನು ಎನ್ನ ಗುರುವೇ ನಿಮ್ಮ ನಿತ್ಯಾನಂದನಿರುವ gopalakrishna vittala. Show all posts

Monday, 2 August 2021

ಬಿನ್ನೈಸಲೇನಿನ್ನು ಎನ್ನ ಗುರುವೇ ನಿಮ್ಮ ನಿತ್ಯಾನಂದನಿರುವ ankita gopalakrishna vittala

ಬಿನ್ನೈಸಲೇನಿನ್ನು ಎನ್ನ ಗುರುವೇ ನಿ

ಮ್ಮ ನಿತ್ಯಾನಂದನಿರುವ ಬಗೆಯನ್ನ ಪ.


ತನ್ನ ಕಾರ್ಯಗಳನ್ನು ನಿಮ್ಮ ಮೇಲೊರಗಿಸಿ

ಬೆನ್ನಿನಂದದಿ ನಿಮ್ಮ ಕಾಡುತಿಹನು

ತನ್ನಿಂದಲಾಗದ ಕಾರ್ಯಗಳು ಇನ್ನುಂಟೆ

ತನ್ನನೆ ತಾನು ಮರೆತಂತೆ ಇರುತಿಹನು 1

ತನ್ನ ಮಾರ್ಗಕೆ ಬರುವ ಜೀವರುಗಳೆಲ್ಲರನು

ನಿಮ್ಮ ವಶಕೊಪ್ಪಿಸಿ ಓರೆಯಾಗಿಹನು

ತಾನೊಬ್ಬ ನಿಮ್ಮಿಂದ ತೇರ್ಗಡೆಯಾದಮೇಲ್

ತನ್ನವರ ತಾನು ಸಲಹದಲೆ ಇರುತಿಹರೆ 2

ಬನ್ನಬಡುತಲಿ ಇರುವ ಘನ್ನ ಜೀವರುಗಳನು

ಮನ್ನಿಸಿ ಕರೆದು ಅಂಕಿತವಿತ್ತಿರಿ

ಇನ್ನಾದರೂ ತಾನು ನಿಮ್ಮ ಕಾರ್ಯಕೆ ನಿಂತು

ನಿಮ್ಮ ಸೇವೆಯನು ಮಾಡದಲೆ ಇರುತಿಹನು 3

ಒಂದೊಂದು ಸೇವೆಗೆ ಒಬ್ಬೊಬ್ಬರಿಹರೆಂದು

ಮುಂದೆ ತನಗಾವುದೂ ತಿಳಿಯದೆಂದು

ಇಂದು ಈ ಪರಿಯಿಂದ ಇರುತಿಹುದು ನ್ಯಾಯವೆ

ತಂದೆ ಮುದ್ದು ಮೋಹನಗುರುವೆ ನೀವ್ ಪೇಳಿ 4

ಸಾಕು ನಿಮ್ಮಯ ಶ್ರಮವ ನೋಡಲಾರೆ ನಾನು

ಈ ಕಂದನಿಗೆ ಇನ್ನು ವರವ ಕೊಟ್ಟು

ಲೋಕಕಾರ್ಯವ ನಡೆಸಿ ನೋಡಿ ಸಂತಸಪಡಿರಿ

ಲೋಕೇಶ ಗೋಪಾಲಕೃಷ್ಣವಿಠ್ಠಲ ಪ್ರಿಯರೆ 5

****