Showing posts with label ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ gurumahipati. Show all posts
Showing posts with label ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ gurumahipati. Show all posts

Thursday, 2 December 2021

ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ankita gurumahipati

 

ಕಾಖಂಡಕಿ ಶ್ರೀ ಕೃಷ್ಣದಾಸರು


ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ಶರಣು ಸಮೀರ ಕುಮಾರ ಉದಾರನೆ ಶರಣು ಪಾವನ ಕಾಯಾ ಪ 


ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ ಹರಿಯತುಡಕಿ ಬಂದು ಹರಿತೇಜದಿ ನಿಂದು ಹರಿಸೆ ಧನುಜ ಮೃಗವಾ ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ ಹರಿಹಯಜಗ ಮುನಿದೇ 1 


ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ ಗೋಪನಲಂಘಿಸಿ ಗೋಪುತ್ರಿಯ ಕಂಡು ಗೋಪೀಡಕರ ಮುರಿದೇ ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ ಗೋಪುರವ ನುರುಹಿ ಗೋಪಾನ್ವಯ ಗುರುಹಿ ಗೋಪದವಿಯ ಪಡೆದೆ 2 


ಮಹಿದರಾನೇಕವತಂದು ಮಹೋದಧಿಯನೆ ಜಿಗಿದು ಅಹಿ ಮಹಿರಾವಣಾನ್ವಯ ಮಹಿರುಹದಲಿ ತರಿದೇ ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ ಮಹದಾ ಗ್ರಣಿಯಾದೆ ||

***