Showing posts with label ಕೇಶವ ನಾರಾಯಣ ಶ್ರೀಶ ಮಾಧವ ಸರ್ವೇಶ ಗೋವಿಂದ ramesha. Show all posts
Showing posts with label ಕೇಶವ ನಾರಾಯಣ ಶ್ರೀಶ ಮಾಧವ ಸರ್ವೇಶ ಗೋವಿಂದ ramesha. Show all posts

Wednesday, 4 August 2021

ಕೇಶವ ನಾರಾಯಣ ಶ್ರೀಶ ಮಾಧವ ಸರ್ವೇಶ ಗೋವಿಂದ ankita ramesha

ಕೇಶವ ನಾರಾಯಣ ಶ್ರೀಶ ಮಾಧವ ಸರ್ವೇಶ ಗೋವಿಂದಗೆಲಿಸೆಂದು ಕೋಲಸರ್ವೇಶ ಗೋವಿಂದಗೆಲಿಸೆಂದು ವಿಷ್ಣುವಿನ ಸೋಸಿಲೆ ಮೊದಲೆ ಬಲಗೊಂಬೆ ಕೋಲ 1

ಮಧುಸೂದನ ತ್ರಿವಿಕ್ರಮ ವಿಧಿಪಿತ ವಾಮನ ಸುದತೆ ಶ್ರೀಧರ ಋಷಿಕೇಶ ಕೋಲಸುದತೆ ಶ್ರೀಧರ ಋಷಿಕೇಶನ ನೆನೆದರೆ ಹದಕಾನೆ ವರವ ಕೊಡುವೊನು ಕೋಲ 2

ಪದ್ಮನಾಭ ದಾಮೋದರ ಮುದ್ದು ಸಂಕರ್ಷಣವಸುದೇವ ನಮ್ಮ ಗೆಲಿಸೆಂದು ಕೋಲವಸುದೇವನಮ್ಮ ಗೆಲಿಸೆಂದು ಪ್ರದ್ಯುಮ್ನಅನಿರುದ್ಧರ ಮೊದಲೆ ಬಲಗೊಂಬೆ ಕೋಲ 3

ಪುರುಷೋತ್ತಮ ಅಧೋಕ್ಷಜ ಹರುಷಾಗೊ ನಾರಸಿಂಹ ಪುರುಷ ಸೂಕ್ತದಲೆ ಪ್ರತಿಪಾದ್ಯ ಕೋಲಪುರುಷಸೂಕ್ತದಲೆ ಅಚ್ಯುತಹರುಷದಿ ನಮ್ಮ ಗೆಲಿಸೆಂದು ಕೋಲ 4

ಜನಾರ್ದನ ಉಪೇಂದ್ರ ಘನಮಹಿಮ ಹರೆ ಕೃಷ್ಣಮುನಿಜನ ವಂದ್ಯ ರಮಿ ಅರಸು ಕೋಲ ಮುನಿಜನ ವಂದ್ಯರಮಿಯರಸುನಿನ್ನ ಪಾದ ನೆನದೆವ ಪಂಥಗೆಲಿಸೆಂದು 5

****