Showing posts with label ಏಳು ಬೆಳಗಾಯಿತು ಬಾಲಕೃಷ್ಣ ಬಹಳ ಮಕ್ಕಳು indiresha ELU BELAGAAYITU BAALAKRISHNA BAHALA. Show all posts
Showing posts with label ಏಳು ಬೆಳಗಾಯಿತು ಬಾಲಕೃಷ್ಣ ಬಹಳ ಮಕ್ಕಳು indiresha ELU BELAGAAYITU BAALAKRISHNA BAHALA. Show all posts

Friday, 3 December 2021

ಏಳು ಬೆಳಗಾಯಿತು ಬಾಲಕೃಷ್ಣ ಬಹಳ ಮಕ್ಕಳು ankita indiresha ELU BELAGAAYITU BAALAKRISHNA BAHALA

ಏಳು ಬೆಳಗಾಯಿತು ಬಾಲಕೃಷ್ಣಬಹಳ ಮಕ್ಕಳು ನಿನ್ನ ಕೇಳುತಿಹರೋ ಪ

ಬರುವಿ ಮನೆಯೊಳಗೆಂದು ಕರೆದು ಪಾಲನು ರುಚಿರತರುಣಿಯರು ಬಚ್ಚಿಟ್ಟು ಶರಣದೊಳಗೆಸರಸ ಮೊಸರನೆ ಕಡೆದು ತ್ವರದಿ ಬೆಣ್ಣೆಯ ತೆಗೆದುಮರೆಮಾಡಿ ಮೂಲೆಯೊಳು ಸುರಿಸುತಿಹರೊ 1

ತುರುವುಗಳಿಗೆ ಸಣ್ಣ ಕರುವುಗಳನೆ ಬಿಟ್ಟುಕರೆದುಕೊಂಬುವರಿನ್ನು ಪುರದ ಜನರುತ್ವರದಿ ಕಣ್ಣನೆ ತೆರೆದು ಒಳಹೊರಗೆ ನೋಡುವರುಅರುಣ ಉದಯಾಗಿಹುದು ತರಣಿ ಬಂದಾ2

ಏಸು ಪುಡುಗರು ನಮ್ಮ ವಾಸದೆದುರಿಗೆ ನಿಂತುಘೋಷದಿಂದಲೆ ವತ್ಸರಾಶಿ ತುರುವಾಕೂಸೆ ಕರೆವರು ನಿನ್ನ ಭೂಷಿಸುವೆ ಬೇಗೇಳುತಾಸು ಹೊರಗ್ಹೋಗಿ ಇಂದಿರೇಶ ಬಾ ಬೇಗ 3
***