Showing posts with label ಹರಿಸ್ಮರಣೆ ಮಾಡುವರು ನರರಲ್ಲವೋ purandara vittala HARISMARANE MAADUVARU NARARALLAVO. Show all posts
Showing posts with label ಹರಿಸ್ಮರಣೆ ಮಾಡುವರು ನರರಲ್ಲವೋ purandara vittala HARISMARANE MAADUVARU NARARALLAVO. Show all posts

Friday 6 December 2019

ಹರಿಸ್ಮರಣೆ ಮಾಡುವರು ನರರಲ್ಲವೋ purandara vittala HARISMARANE MAADUVARU NARARALLAVO

Audio by Mrs. Nandini Sripad

ಶ್ರೀ ಪುರಂದರದಾಸರ ಕೃತಿ 

 ರಾಗ ಮಧುವಂತಿ           ಖಂಡಛಾಪುತಾಳ 

ಹರಿಸ್ಮರಣೆ ಮಾಡುವರು ನರರಲ್ಲವೋ ಶ -॥ ಪ ॥
ರೀರವದು ಎಲ್ಲರಂತಲ್ಲವರದು ॥ ಅ ಪ ॥

ಮುರಹರನಿಗೆರಗುವ ಶಿರ ದ್ವಾರಕಾಪುರವು ।
ಚರಿತೆ ಕೇಳುವ ಕರ್ಣ ಗೋಕರ್ಣವೂ ॥
ಬಿರುದು ಹೊಗಳುವ ಜಿಹ್ವೆ ನಿಜಕ್ಷೀರಸಾಗರವು ।
ಚರಣಗಳ ಪೂಜಿಸುವ ಕರವೆ ರಾಮೇಶ್ವರವು ॥ 1 ॥

ವಿಷ್ಣು ನಿರ್ಮಾಲ್ಯವಾಘ್ರಾಣಿಪ ನಾಸವ ಕಾಂಚಿ ।
ಕೃಷ್ಣನ್ನ ನೋಡುವ ದೃಷ್ಟಿ ಶ್ರೀಮುಷ್ಣ ॥
ವಿಟ್ಠಲರ್ಪಿತವನುಂಬುವ ಉದರವೇ ಬದರಿ ।
ಘಟ್ಯಾಗಿ ಹರಿಯಿಪ್ಪ ಹೃದಯವೇ ವೈಕುಂಠ ॥ 2 ॥

ವರಜಂಘೆ ಪದ ಗಂಗೆ ತುಂಗೆ ಎಂದೆನಿಸುವುದು ।
ಸರುವಾಂಗನಂತಾಸನ ಸಿತದ್ವೀಪ ॥
ಬರಿಯ ಮಾತಲ್ಲವಿದು ಶೃತಿಪುರಾಣಗಳುಕ್ತಿ ।
 ಪುರಂದರವಿಟ್ಠಲ ಅವರೊಶದೊಳಿಹನು ॥ 3 ॥
******

ಹರಿ ಸ್ಮರಣೆ ಮಾಡುವರು ನರರಲ್ಲವೋ |ಪ.|
ಶರೀರವು ಎಲ್ಲರಂತಲ್ಲವರದು ||ಅ.ಪ.||

ಮುರಹರಿಗೆರಗುವ ಶಿರ ದ್ವಾರಕಾಪುರವು | 
ಚರಿತೆ ಕೇಳುವ ಕರ್ಣಗೋಕರ್ಣವೋ ||
ಬರಿದು ಹೊಗಳುವ ಜಿಹ್ವೆ ನಿಜಕ್ಷೀರ ಸಾಗರವು|
ಚರಣ ಪೂಜಿಸುವ ಕರಗಳೇ ರಾಮೇಶ್ವರ||1||

ವಿಷ್ಣು ನಿರ್ಮಾಲ್ಯಾಘ್ರಾಣಿಸುವ ನಾಸಿಕ ಕಂಚಿ |
ಕೃಷ್ಣನ ನೋಡುವ ದೃಷ್ಟಿ ಶ್ರೀಮುಷ್ಣವು |
ವಿಠಲಗರ್ಪಿತವೆಂಬ ಉದರವೇ ಬದರಿ |
ಘಟ್ಯಾಗಿ ಇರುತಿಪ್ಪ ಹೃದಯವೇ ವೈಕುಂಠ ||2||

ವರ ಜಂಘೆ ಪದ ಗಂಗೆ ತುಂಗೆ ಎನಿಸುವವು|
ಸರ್ವಾಂಗ ಅನಂತಾಸನ ಶ್ವೇತದ್ವೀಪ|
ಬರಿಯಮಾತಲ್ಲವಿದು ಶೃತಿ ಪುರಾಣಗಳುಕ್ತಿ|
ಪುರಂದರ ವಿಠಲನು ಅವರ ವಶದೊಳಿರುತಿಹನು||3||
********

ಶ್ರೀ ಪುರಂದರದಾಸರ ಕೃತಿ 

 ರಾಗ ಮಧುವಂತಿ           ಖಂಡಛಾಪುತಾಳ 

ಹರಿಸ್ಮರಣೆ ಮಾಡುವರು ನರರಲ್ಲವೋ ಶ -॥ ಪ ॥
ರೀರವದು ಎಲ್ಲರಂತಲ್ಲವರದು ॥ ಅ ಪ ॥

ಮುರಹರನಿಗೆರಗುವ ಶಿರ ದ್ವಾರಕಾಪುರವು ।
ಚರಿತೆ ಕೇಳುವ ಕರ್ಣ ಗೋಕರ್ಣವೂ ॥
ಬಿರುದು ಹೊಗಳುವ ಜಿಹ್ವೆ ನಿಜಕ್ಷೀರಸಾಗರವು ।
ಚರಣಗಳ ಪೂಜಿಸುವ ಕರವೆ ರಾಮೇಶ್ವರವು ॥ 1 ॥

ವಿಷ್ಣು ನಿರ್ಮಾಲ್ಯವಾಘ್ರಾಣಿಪ ನಾಸವ ಕಾಂಚಿ ।
ಕೃಷ್ಣನ್ನ ನೋಡುವ ದೃಷ್ಟಿ ಶ್ರೀಮುಷ್ಣ ॥
ವಿಟ್ಠಲರ್ಪಿತವನುಂಬುವ ಉದರವೇ ಬದರಿ ।
ಘಟ್ಯಾಗಿ ಹರಿಯಿಪ್ಪ ಹೃದಯವೇ ವೈಕುಂಠ ॥ 2 ॥

ವರಜಂಘೆ ಪದ ಗಂಗೆ ತುಂಗೆ ಎಂದೆನಿಸುವುದು ।
ಸರುವಾಂಗನಂತಾಸನ ಸಿತದ್ವೀಪ ॥
ಬರಿಯ ಮಾತಲ್ಲವಿದು ಶೃತಿಪುರಾಣಗಳುಕ್ತಿ ।

 ಪುರಂದರವಿಟ್ಠಲ ಅವರೊಶದೊಳಿಹನು ॥ 3 ॥
********