Showing posts with label ನಿನ್ನ ನಾನೇನೆಂದೆನೊ ಗುರುವೆ ಜಗದ್ಗುರುನಿನ್ನ gurugovinda vittala. Show all posts
Showing posts with label ನಿನ್ನ ನಾನೇನೆಂದೆನೊ ಗುರುವೆ ಜಗದ್ಗುರುನಿನ್ನ gurugovinda vittala. Show all posts

Monday 4 November 2019

ನಿನ್ನ ನಾನೇನೆಂದೆನೊ ಗುರುವೆ ಜಗದ್ಗುರುನಿನ್ನ ankita gurugovinda vittala

ನಿನ್ನ ನಾನೇನೆಂದೆನೊ | 
ಗುರುವೆ ಜಗದ್ಗುರುನಿನ್ನ ನಾನೇನೆಂದೆನೋ ಪ

ನಿನ್ನ ನಾನೇನೆಂದೆ ನಿಖಿಲ ಜೀವರ 
ಒಡೆಯಪನ್ನಗ ನಗಧೀಶ ಪತಿತೋದ್ಧಾರನ ದೂತಅ.ಪ.

ವಾರಿಧಿಯನೆ ದಾಟಿ | 
ನಾರಿ ಚೋರನ ಜರೆದುನಾರಿಗೋಸುಗ ಕೌರವರ ಸವರೀ ||

ಮಾರಮಣನೆ ಸಾರತಮನೆಂಬ ವೇದಾಂತಸಾರ 
ಪೇಳ್ದಗೆ ಶರಣೆಂದೆನು ಅಲ್ಲದೇ ||
ಭಾರಿ ಕೋತಿಯು ಎಂದೆನೆ - 
ಕುಪ್ಪುಸ ತೊಟ್ಟುನಾರಿಯಾದವನೆಂದೆನೆ - 
ಕಾವಿಯನುಟ್ಟುಪೋರಯತಿಯು ಎಂದನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1

ನೆರಹಿ ಕಪಿ ಸೈನ್ಯವ | 
ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಿಸೀ ||
ಜರೆಯ ಸುತನ ಸೀಳಿ ಬದರೀಗೆ
ತೆರಳೀದವಗೆ ನಮೋ ಎಂದನು ಅಲ್ಲದೇ ||
ಗಿರಿಯ ಪೊತ್ತವನೆಂದನೆ - 
ರಕ್ಕಸಿಯಬೆರೆದ ನೆಂದವನೆಂದೆನೆ - 
ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳವನೆಂದೆನು ಅಲ್ಲದೆ 2

ಕರ್ತು ಹರಿಯೆ ಎಂದುನೀಚೋಚ್ಛ 
ತರತಮ ಪೇಳ್ದೆ ಎಂದೆಲ್ಲದೆ ||
ಖೇಚರ ನೀನೆಂದೆನೆ - 
ವಿರಾಟನೊಳ್‍ಪಾಸಚಕ ನೀನೆಂದೆನೆ - 
ಭವಾಟವಿಮೋಚಕನೇ ಗುರು ಗೋವಿಂದ ವಿಠಲ
ಅರ್ಚಕನೆಂದು ಸ್ತುತಿಗೈದೆನಲ್ಲದೆ 3
********