Showing posts with label ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ purandara vittala. Show all posts
Showing posts with label ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ purandara vittala. Show all posts

Thursday, 5 December 2019

ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ purandara vittala



ರಾಗ - : ತಾಳ -


ಧ್ವಜದ ತಿಮ್ಮಪ್ಪ ಪಲ್ಲಕಿಯನೇರಿ ತನ್ನಯ l

ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ll ಪ ll


ಬಲದಲಬುಜಭವ ಭವಾದಿಗಳೆಡದಲಿ l

ಉಲಿವ ವೇದ - ಉಪನಿಷದುಗಳು ll

ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ l

ಹಲವು ಋಷಿ - ಮುನಿಕರ ಹಿಂದೆ ಬರುತಿರಲು ll 1 ll


ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ l

ಚಿತ್ತಜಾತನು ವ್ಯಜನವ ಬೀಸಲು ll

ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು l

ಹಸ್ತದ ಕಾಳಂಜಿ ಹರಿಣಾಂಕನು ಬರೆ ll 2 ll


ವರುಣನು ಸ್ವಾದುಜಲವ ಪಿಡಿದು ಬರೆ l

ತರಣಿ ತನಗೆ ಆಧಾರದಂತಿರಲು ll

ಸುರರು ಸುಮನಗಳಿಂದ ಸರ್ವರು ತಮತಮ್ಮ l

ಪರಿಪರಿ ಆಯುಧಗೊಂಡು ಬಳಸಿಬರೆ ll 3 ll


ಮಂದರ ಮಧ್ಯಮ ತಾರಕ ಮೋಹನ l

ದಿಂದ ಗಂಧರ್ವರು ಗಾನಮಾಡೆ ll

ತೋಂಧಿಮಿಧಿಮಿಕೆಂದು ತಾಳಮೇಳದಿ ನಾ - l 

ರಂದ ಪಾಡಲು ಆಡುತಾಡುತ ಬರುತಿರೆ ll 4 ll


ಲೋಕನಾಯಕ ಲೋಕೈಕ ರಕ್ಷಾಮಣಿ l

ಸಾಕಾರರೂಪ ಸದ್ಗುಣಭರಿತ ll

ವೆಂಕಟೇಶ ವ್ಯಾಸಮುನಿವರದನಾದ ಕರು - l

ಣಾಕರ ಪುರಂದರವಿಟ್ಠಲನು ಗರುಡ ll 5 ll

***


ಪುರಂದರದಾಸರು
ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ |ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ಪ.

ಬಲದಲಬುಜಭವ ಭವಾದಿಗಳೆಡದಲಿ |ಉಲಿವ ವೇದ - ಉಪನಿಷದುಗಳು ||ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ |ಹಲವು ಋಷಿ - ಮುನಿನಿಕರ ಹಿಂದೆ ಬರುತಿರಲು 1

ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ |ಚಿತ್ತಜಾತನು ವ್ಯಜನವ ಬೀಸಲು ||ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು |ಹಸ್ತದ ಕಾಳಂಜಿ ಹರಿಣಾಂಕನು ಬರೆ 2

ವರುಣನು ಸ್ವಾದುಜಲವ ಪಿಡಿದು ಬರೆ |ತರುಣಿ ತನಗೆ ಆಧಾರದಂತಿರಲು ||ಸುರರು ಸುಮನಗಳಿಂದ ಸರ್ವರು ತಮತಮ್ಮ |ಪರಿಪರಿ ಆಯುಧಗೊಂಡು ಬಳಸಿಬರೆ 3

ಮಂದರ ಮಧ್ಯಮತಾರಕ ಮೋಹನ |ದಿಂದ ಗಂಧರ್ವರು ಗಾನಮಾಡೆ ||ತೋಂಧಿಮಿಧಿಮಿಕೆಂದು ತಾಳಮೇಳದೆ ನಾ - |ರಂದ ಪಾಡಲು ಆಡುತಾಡುತ ಬರುತಿರೆ 4

ಲೋಕನಾಯಕ ಲೋಕೈಕ ರಕ್ಷಾಮಣಿ |ಸಾಕಾರರೂಪ ಸದ್ಗುಣಭರಿತ ||ವೆಂಕಟೇಶ ವ್ಯಾಸಮುನಿವರದನಾದ ಕರು - |ಣಾಕರ ಪುರಂದರವಿಠಲನು ಗರುಡ 5
*******