Showing posts with label ಸೂರಿಗಳರಸ ಶ್ರೀ ನರಸಿಂಹಾರ್ಯರ indiresha aralikatte narasimhacharya stutih. Show all posts
Showing posts with label ಸೂರಿಗಳರಸ ಶ್ರೀ ನರಸಿಂಹಾರ್ಯರ indiresha aralikatte narasimhacharya stutih. Show all posts

Tuesday 5 October 2021

ಸೂರಿಗಳರಸ ಶ್ರೀ ನರಸಿಂಹಾರ್ಯರ ankita indiresha aralikatte narasimhacharya stutih

 ರಾಗ : ಕೇದಾರ ಗೌಳ          ತಾಳ : ಆದಿ


ಸೂರಿಗಳರಸ ಶ್ರೀ ನರಸಿಂಹಾರ್ಯರ ।
ಸಾರಿ ಭಜಿಸಿ ಬೇಡಿರೈ ।। ಪಲ್ಲವಿ ।।

ಧಾರುಣಿಯೊಳು ಜನಿಸಿ ಮನೆ ಧನ ।
ಸೂರಿ ಮಾಡುವರೆಲ್ಲಿ ಕಾಣೆನು ।
ವಾರಿಜಾಸನ ವಿನುತ ಹರಿ ಪುರ ।
ಸೇರಿ ಸುಖಿಸುವಪಾರ ಮಹಿಮರ ।। ಅ ಪ ।।

ಧರೆಯೊಳು ಪ್ರಹ್ಲಾದ ವರದ ವಾಯು । ಆಕ್ಷೋ ।
ಭರ ಸೂನು ಜಯತೀರ್ಥಾರ್ಯರು ।
ಪರಿಮಳ ರಚಿಸಿದ ಪರಮ ಹಂಸಾಗ್ರಣಿ ।।
ಗುರು ರಾಘವೇಂದ್ರಾರ್ಯರು ।
ಪರಿ ಪರಿ ಪೂಜಿಸೆ ಮರುಳಾಗೆ ಇವರಿಗೆ ।
ಕರುಣದಿ ಒಲಿದಿಹರೋ - ಇಲ್ಲಿಹರೋ ।। ಚರಣ ।।

ಪರಮ ಕರುಣಾ ಶರಧಿ ಸಂತತ ।
ಶರಣರ ಸರಸಿಜ ಭಜಿಪ ಜನರಿಗೆ ।
ಮರುತ ಶಾಸ್ತ್ರವ ಬೋಧಿಸುತ । ಉ ।।
ದ್ಧರಿಸಿ ಪಾಮರ ನರರ ಪೊರೆವರ ।
ಅರುಹಲಳವಲ್ಲ ಗುರುವರ್ಯರ ಮಹಿಮೆ ।
ಸಿರಿ ಪತಿ ಕರುಣಾಪಾತ್ರಾ ।। ಚರಣ ।।
ಜರಿವ ವಿಳಂಬಿ ವತ್ಸರದೊಳಾಷಾಢ । ಪಾಂ ।
ಡುರ ನಂದ ತಿಥಿಯು ಮಿತ್ರಾ ।
ವರ ವಾಸರದಿ ಶ್ರೀ ಹರಿನಾಮ ಜಪಿಸುತ ।।
ತೆರಳಿ ಪೋದರು ವಿಚಿತ್ರಾ ಪಾವನಗಾತ್ರ ।
ಪರಮ ಮಂಗಳ ಚರಿತ ಸದ್ಗುಣ ಭರಿತ ಸುಜನ । ಚ ।
ಕೋರ ಚಂದಿರ ಅರ ವಿದೂರರ ಸ್ಮರಣೆ ಸಾಧನ ।। ಚರಣ ।।

ಕ್ಲೇಶ ಸುಖಮಯ ತಿಳಿದು । ಮನ ।
ದೊಳಗೇಸು ಸಾಧನಗೈದು ।
ನಿತ್ಯುಪವಾಸದಿಂದಲಿ ನಲಿದು ಭಕ್ತರ ।
ಆಸೆಯನು ಪೂರೈಸಿ ಮೆರೆದಾ ।। ಚರಣ ।।

ಭಾಸುರ ಭಾನು ಸಂಕಾಶರೆನಿಸಿ ಸರ್ವ ।
ದೇಶದೊಳು ಖ್ಯಾತರಾಗೀ ।
ಕಾಸು ಕಾಂಚನಾದಿ ನಿರಾಶಾಸಿಯಂ ।।
ವಿಷಯಾ೦ಬು ರಾಶಿಯನು ದಾಟೀ ಸಾಗೀ ।
ತೋಷದಲಿ ಗುರು ಇಂದಿ ।
ರೇಶರಾಯನ ನಿಜ ದಾಸರೊಳು ಮಿಳಿತರಾಗೇ ಚೆನ್ನಾಗೀ ।। ಚರಣ ।।
***