Showing posts with label ಮಂಗಳಂ ಸರಸ್ವತಿದೇವಿಗೆ ಜಯ ಮಂಗಳಂ venkatakrishna. Show all posts
Showing posts with label ಮಂಗಳಂ ಸರಸ್ವತಿದೇವಿಗೆ ಜಯ ಮಂಗಳಂ venkatakrishna. Show all posts

Tuesday, 1 June 2021

ಮಂಗಳಂ ಸರಸ್ವತಿದೇವಿಗೆ ಜಯ ಮಂಗಳಂ ankita venkatakrishna

by yadugiriyamma  

 ಶೃಂಗೇರಿ

ಮಂಗಳಂ ಸರಸ್ವತಿದೇವಿಗೆ ಜಯ

ಮಂಗಳಂ ಸರಸಿಜೋದ್ಭವನರಸಿಗೆ ಪ


ಸತ್ಯಲೋಕವ ಬಿಟ್ಟು ಅತ್ಯಂತಹರುಷದಿ

ಭಕ್ತರಿಗೆ ತಾನೊಲಿದು ಬಂದು

ಮತ್ತೆ ಶೃಂಗೇರಿಯ ರತ್ನದ ಪೀಠದಿ

ಪ್ರತ್ಯಕ್ಷಳಾದ ಶಾರದದೇವಿಗೆ 1


ರತ್ನದಕಿರೀಟ ಮುತ್ತಿನಬಟ್ಟು ಮುಕುರವನಿಟ್ಟು ಮುತ್ತಿನವಾಲೆ

ಮೇಲಾದ ಕೇದಗೆ ರಾಗಟೆಹೆರಳು ಬಂಗಾರಗುಂಡುಗಳಿಟ್ಟ

ಶಾರದದೇವಿಗೆ 2


ಕೆತ್ತನೆ ಅಡ್ಡಿಕೆ ಮುತ್ತಿನಕಟ್ಟಾಣಿ ಹಸ್ತಕಡಗ ಹರಡಿ ವಂಕಿನಿಟ್ಟು

ಮತ್ತೆ ಕಮಲ ಗಿಣಿ ಪುಸ್ತಕಕಂಠವು ಭಕ್ತರಿಗಭಯವ

ತೋರುವ ದೇವಿಗೆ 3


ಚಂದದ ಪೀತಾಂಬರ ಕುಂದಣದೊಡ್ಯಾಣ ಅಂದುಗೆ ಗೆಜ್ಜೆ

ಪಾಡಗವನಿಟ್ಟ ಬಂದಭಕ್ತರಿಗೆ ಇಷ್ಟಾರ್ಥವ ಕೊಡುತಿರ್ಪ

ಇಂದಿರೆರಮಣನಸೊಸೆ ಶಾರದೆಗೆ 4


ಯಾವಾಗಲು ಎನ್ನ ನಾಲಗೆಯಲಿ ನಿಂದು ನಾರಾಯಣನ

ನಾಮವ ನುಡಿಸಿ ಕಾಮಕ್ರೋಧಲೋಭಮೋಹ ಬಿಡಿಸಿ

ಶ್ರೀನಿವಾಸನಪಾದ ತೋರ್ಪ ಶಾರದೆಗೆ 5

****