ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ||
ಕೊಳಲನೂದುವ ಚಂದದಿ, ಹಣೆಯಲ್ಲಿ
ಸುಳಿಗೂದಲಾಡುವಂದದಿ
ತುಳಸೀ ಪುಷ್ಪದ ಬೃಂದದಿ ಪುರದಾಚೆಯಲಿ
ನಲಿದಾಡುವಂದದಿ
ಘಲ ಘಲ ಘಲ ಘಲ ನಲಿವ ಕುಂಡಲ ನಿಜ
ತೋಳುಗಳೊಪ್ಪುವ ಬಾಪುರಿಗಳಿಂದ
ಥಳ ಥಳ ಥಳ ಥಳ ಕಾಂತಿಗಳಿಂದ ||
ಮಣಿಯಿಲ್ಲದ ಕೌಸ್ತುಭದಿ, ಎಸೆವ ಮುಕುಟ
ಮಣಿಹಾರ ಶ್ರೀವತ್ಸಾದಿ
ಮಣಿಮಯ ಕಿರೀಟದಿ ಅಂದದೊಪ್ಪುವ
ಅಗಣಿತ ಮಹತೇಜದಿ
ಝಣ ಝಣ ಝಣ ಝಣ ಝಂ ಪರಿಮಳದಿ
ಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದ
ಠಣ ಠಣ ಠಣ ಠಣ ಉಡುಝಂಗೆಗಳಿಂದ ||
ಅಮಿತ ಜಯ ಪಾಂಡುರಂಗ ವಿಜಯಭಾವಾ
ಅಮರೇಶ ನಿಕರತುಂಗ
ವಿಮಲಪುರಿ ಅಂತರಂಗ ಪುರಂದರ
ವಿಠಲೇಶ ನಿಕರತುಂಗ
ಘಮ ಘಮ ಘಮ ಘಮ ಘಂ ಪರಿಮಳದಿ
ಅಮರರು ಮೃದಂಗ ತಾಳಗಳಿಂದ
ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನ್ನುತ ||
***
pallavi
nandanandana bArO
anupallavi
enage ninna saundarya lIleya tOrO
caraNam 1
koLalanUduva candadi haNeyalli suLigudalADu vandadi tuLasI puSpada brndadi puradAceyali nalidADuvandadi
khala khala khala khala naliva kuNDala nija tOLugaLoppuva bApurigaLinda thaLa thaLa thaLa thaLa kAntigaLinda
caraNam 2
maNiyillada kaustubhadi eseva mukuTa maNihAra shrIvatsAdi maNimaya kirITadi anta doppuva agaNita mahatEjadi
jhaNa jhaNa jhaNa jhaNa jham parimaLadi kiNi kiNi kiNi kiNi kinkiNi ravadinda ThaNa ThaNa ThaNa ThaNa uDujhangegaLinda
caraNam 3
amita jaya pANDuranga vijayabhAva amarEsha nikaratunga vimala puri antaranga purandara viTTalEsha nikaratunga
ghama ghama ghama ghama ghamparimaLadi amararu mrdanga tALagaLinda dhimi dhimi dhimi dhimi dhim dhim ennuta
***