..
kruti by Nidaguruki Jeevubai
ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ
ವರನೆಂದು ಮೆರೆಯುವರೆ ಪ
ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ
ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ
ಮನ್ಮಥನ ವೈರಿಗೆ ವಾಸಕೆ ಯೋಗ್ಯ
ಮನೆಯಿಲ್ಲದಿರುವಾತಗೆ
ಮನೆಯು ಮಶಾಣವೆನ್ನುತ ಪೇಳುತಿಹರಿನ್ನು
ಸುಮನಸರೊಡಯನೆ ಸಖನಂತೆ ಇದು ಕೇಳು
ಮನಸಿನ ಅಭಿಮಾನಿ ಶಿವನು
ಘನತರದ ವಿಷಪಾನಗೈದನು
ಮನದಿ ಶ್ರೀ ರಘುವರನ ಸ್ಮರಿಸುತ
ವೃಷಭ ವಾಹನವೇರಿ ಚರಿಪಗೆ 1
ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ
ದಂಡೆ ಅಲಂಕರಿಸಿರುವ
ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ
ಚಂದ್ರಶೇಖರ ಶಿವನೆಂದು ಕರೆಸಿಕೊಂಬ
ಕೆಂಡಗಣ್ಣಿನ ಕ್ರೂರರೂಪನ
ಕಂಡು ಹರುಷದಿ ಹಿಗ್ಗಿ ನಲಿಯುವಿ
ಮಂಡೆಯಲಿ ಕೆಂಜಡೆಯ ಸುತ್ತಿಹ
ಹಿಂಡು ವಿಷ ಸರ್ಪಗಳಲಂಕೃತನಿಗೆ 2
ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ
ತಿರಿದುಂಡು ಹರುಷಿಸುವ
ಪರಿ ಪರಿ ದೈತ್ಯ ಪಿಶಾಚಯಕ್ಷರ ಕೂಡಿ
ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ
ಪರಮ ವೈರಾಗ್ಯವನು ಧರಿಸಿ
ಫಣೆಯ ಗಣ್ಣನು ಬಳಿದು ಭಸುಮವ
ಚರಿಸುವನು ರುಷಿವರರ ತೆರದಲಿ
ಎಣಿಸಿ ಮಣಿಗಳ ಒಲಿಸಿ ಹರಿಯನು 3
ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ
ರಾಮಚರಿತೆಯ ಬೋಧಿಸಿ
ಕಾಮಹರನು ಕೈಲಾಸಪತಿಯು ಮತ್ತೆ
ಕಾಮದೇವನು ಎಂಬ ನಾಮಸ್ಮರಿಸುವ
ಆ ಮಹಾಗಣಪತಿಯು ಪುತ್ರನು
ವೀರಭಕ್ತನು ಸುತನು ಶಿವನಿಗೆ
ಪ್ರೇಮದಲಿ ಷಣ್ಮುಖನು ಸುತನೆಂ-
ದೀ ಮಹಾಮಹಿಮೆಗಳು ತಿಳಿಯದೆ4
ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ
ಚಂದದ ವರನೇ ಕೇಳು
ಮಂದರೋದ್ಧರ ಶ್ರೀ ಮುಕುಂದನ ಭಜಿಸಲು
ಚಂದದ ವರಗಳ ಕುಂದದೆ ಕರುಣಿಪ
ಕಂದುಗೊರಳನು ಶಿವನು ಕಮಲ
ನಾಭ ವಿಠ್ಠಲನ ಭಜಿಪ ಸಂತತ
ಮಂದಗಮನೆಯ ಇಂದುಧರನಿಗೆ
ಚಂದದಲಿ ವನಮಾಲೆ ಹಾಕುತ 5
***