Showing posts with label ಶರಣು ಶರಣು ಶ್ರೀಪರಮಪುರುಷಗೆ ಶರಣು venkatakrishna. Show all posts
Showing posts with label ಶರಣು ಶರಣು ಶ್ರೀಪರಮಪುರುಷಗೆ ಶರಣು venkatakrishna. Show all posts

Tuesday 1 June 2021

ಶರಣು ಶರಣು ಶ್ರೀಪರಮಪುರುಷಗೆ ಶರಣು ankita venkatakrishna

by yadugiriyamma  

 

ವಿಶೇಷ ಸಂದರ್ಭಗಳ ಹಾಡುಗಳು

1. ಶ್ರೀರಂಗ ಮಹಾತ್ಮ್ಯಮ್

(ಶ್ರೀರಂಗದ ವಿವಿಧ ಉತ್ಸವಗಳನ್ನು ಕುರಿತ ಕೀರ್ತನೆಗಳು)


ಶರಣು ಶರಣು ಶ್ರೀಪರಮಪುರುಷಗೆ ಶರಣು ವರಲಕ್ಷ್ಮೀದೇವಿಗೆ

ಶರಣು ಶಠಕೋಪಾದಿಮುನಿಗಳಿಗೆ ಶರಣು ಅಸ್ಮದ್ಗುರುವಿಗೆ ಪ


ಶರಣು ತುರಂಗಮುಖನಿಗೆ ಶರಣು ಹಂಸಾವತಾರಗೆ

ಶರಣು ಮತ್ಸ್ಯ ಕೂರ್ಮ ವರಾಹಗೆ ಶರಣು ನರಸಿಂಹರೂಪಿಗೆ 1


ಶರಣು ವಾಮನ ಭಾರ್ಗವರಾಮಗೆ ಶರಣು ರಾಮ ಬಲರಾಮಗೆ

ಶರಣು ಶ್ರೀಕೃಷ್ಣ ಕಲ್ಕಿರೂಪಗೆ ಶರಣು ಕರುಣಾಳು ರಂಗಗೆ* 2


****