ಸಾಧಿಸಿ ಗುರುಗುಟ್ಟು ಭೇದಿಸಿ ಮನವಿಟ್ಟು ವೇದಕೆ ನಿಲುಕದ ಹಾದಿಯದೋರುವ ಸದ್ಗುರು ದಯಗೊಟ್ಟು ಪ
ಮಾತಿಲೆ ಆಡುವ ಜ್ಞಾನ ಯಾತಕ ಬಾಹುದೇನ ಆತ್ಮಕದೋರುವ ನಿಜಖೂನ ಪ್ರತ್ಯೇಕವಾದ ಸ್ಥಾನ 1
ಮಾತೆ ಆಗೇದ ಮುಂದೆ ರೀತ್ಯಡಗೇದ ಹಿಂದೆ ನೀತಿಯ ತೋರುವ ಗುರುತಂದೆ ಜ್ಯೋತಿಸ್ವರೂಪೊಂದೆ 2
ತಾಯಿತವಾಗೆದ ಗುಟ್ಟು ಧ್ಯಾಯಿಸಿ ರೀತಿ ಇಟ್ಟು ಆಯಿತು ನಿಜಗುಣ ಬಿಟ್ಟು ಹೋಯಿತು ಜನ ಕೆಟ್ಟು 3
ಗುಟ್ಟು ಕೇಳಿ ಪೂರ್ಣ ಮುಟ್ಟಿ ಮಾಡಿ ಮನ ಇಟ್ಟುಕೋ ಮಹಿಪತಿಗುರುಬೋಧ ನಿಜಧನ 4
***