Showing posts with label ಹಂಗಿಗನಾಗಬೇಡಾ ಏ ಮನವೇ govinda. Show all posts
Showing posts with label ಹಂಗಿಗನಾಗಬೇಡಾ ಏ ಮನವೇ govinda. Show all posts

Monday, 18 November 2019

ಹಂಗಿಗನಾಗಬೇಡಾ ಏ ಮನವೇ ankita govinda

by ಗೋವಿಂದದಾಸ
ಹಂಗಿಗನಾಗಬೇಡಾ | ಏ ಮನವೇ | ಹಂಗಿಗನಾಗಬೇಡಾ |ಆ ಯಮನಿಗೆ ಹಂಗಿಗನಾಗಬೇಡಾ ಪ

ಕಾಮಕ್ರೋಧವು ಲೋಭಮದ ಮಾತ್ಸರ್ಯಗಳೆಂಬ |ವ್ಯಾಮೋಹಾದಿಗಳಿಗೆ ಸಿಲುಕಿ ಸುಮ್ಮನೆ ನೀನು1

ಪರದಾರಾಂಶದಿ ಮನ | ವಿರಿಸಿ ಕಾಮಾದಿ ವ್ಯರ್ಥ |ಗುರುಹಿರಿಯರಜರೆ| ದಾಡಿ ಗರ್ವದಿ ನೀನು2

ಸತಿಸುತರೆಂದೆಂಬ | ಮೋಹಪಾಶಕೆ ಸಿಕ್ಕಿ |ಅತಿಥಿ ಸತ್ಕಾರ ಮಾಡದೆ | ಲೋಭತ್ವದಿ ನೀನು3

ಧರಣಿ ದಾನಾದಿಗಳ | ತನು ಶಕ್ತಿ ಮದದಿಂದ |ಪರರಿಗೆ ಕೇಡನ್ನೆ ಬಗೆವ ಮತ್ಸರದಿ ನೀ4

ನೆಂಟರಿಷ್ಟರು ಸರ್ವ | ಮಂದಿ ಸೇವಕರೆಂದು |ತುಂಟತನದಿ ಗೋ|ವಿಂದನಾ ಪಾದಮರತು ನೀ5
*******