Showing posts with label ಶ್ರೀರಮೇಶನೆ ಶ್ರೀ ನಾರಸಿಂಹ ಶ್ರೀ ರಮೇಶನೆ gopalakrishna vittala. Show all posts
Showing posts with label ಶ್ರೀರಮೇಶನೆ ಶ್ರೀ ನಾರಸಿಂಹ ಶ್ರೀ ರಮೇಶನೆ gopalakrishna vittala. Show all posts

Monday, 2 August 2021

ಶ್ರೀರಮೇಶನೆ ಶ್ರೀ ನಾರಸಿಂಹ ಶ್ರೀ ರಮೇಶನೆ ankita gopalakrishna vittala

ಶ್ರೀ ರಮೇಶನೆ | ಶ್ರೀ ನಾರಸಿಂಹ ಶ್ರೀ ರಮೇಶನೆ ಪ.


ಶ್ರೀ ರಮೇಶ ಸುರ ಸಾರ್ವಭೌಮ ಭವ

ತಾರಕಗೊಳಿಸುವ ಕಾರಣಪುರುಷ ಅ.ಪ.


ಆದಿಮೂಲನೆ | ಅಪಾರ ಮಹಿಮ ಖೇದದೂರನೆ

ವಾದಿಪ ಪಿತನೊಳು ಸಾಧಿಪೆ ನಿನ ಮತ

ಮೋದಗೊಳಿಸಿ ಪ್ರಹ್ಲಾದನ ಪೊರೆದೆ 1

ಮಾಧವ ಹರೆ | ಮುರವೈರಿ ಶೌರಿ ಭೂಧರಾ ದೊರೆ

ಕಾದಿದ ದುಷ್ಟ ದೈತ್ಯಾದಿಗಳ ಕೊಂಡು

ಮೋದವಿತ್ತೆ ಭೂದೇವಿಗೆದೆ ಶ್ರೀಶಾ 2

ಭೂಪರೈವರು | ಎದುರಲ್ಲಿ ಇರಲು ಪಾಪಿ ಖೂಳರು

ದ್ರೌಪದಿ ವಸನವ ಕೈಪಿಡಿದೆಳೆಯಲು

ಶ್ರೀ ಪತಿ ಸಲಹೆನೆ ತಾಪವ ಬಿಡಿಸದೆ 3

ನೀರೊಳಾಡಿದೆ | ನೀ ಕಲ್ಲು ಪೊತ್ತು ನಾರಿಯ ತಂದೆ

ನಾರಸಿಂಹ ವಟು ವೀರರಾಮಚಂದ್ರ

ಜಾರಚೋರ ವಸ್ತ್ರದೂರನೆ ಕಲ್ಕಿ 4

ಗೋಪಾಲಕೃಷ್ಣ | ವಿಠ್ಠಲದೇವ ಕಾಪಾಡೊ ಕೃಷ್ಣ

ರೂಪ ರೂಪಾಂತರ ವ್ಯಾಪಿಸಿ ಜಗದೊಳು

ಶ್ರೀಪತಿ ಹೃದಯದಿ ರೂಪವ ತೋರೊ 5

****