..
kruti by Srida Vittala Dasaru Karjagi Dasappa
ಶ್ರೀ ವಾದಿರಾಜರು
ರಾಜರ ಭಾಗ್ಯವಿದು ಸ್ವಾದಿರಾಜರ ಭಾಗ್ಯವಿದು
ಸೋಜಗವೆನಿಸಿ ರಾಜಿಸುತಿದಕೊ ರಾಜರ ಭಾಗ್ಯವಿದು ಪ
ಬುಧಜನಕೊಪ್ಪುವ ಪದ ಸುಳಾದಿ ಖಳ
ರೆದೆಗಿಚ್ಚೆನಿಸುವ ಚತುರತೆಯಾ
ಸದಮಲ ನಾನಾವಿಧ ಗ್ರಂಥದಿ ಹಯ-
ವದನನ ಪೂಜೆಯು ಯಜಿಸುವುದೆಲ್ಲ1
ತಮ್ಮಯ ನೇಮವು ಒಮ್ಮಿಗು ಬಿಡದಂ-
ತಮ್ಮಯ ಬಿಡದಲೆ ಸಮ್ಮೊಗದಾ
ಅಮ್ಮಹ ಶಾಸಖಿ ಬÉೂಮ್ಮಭೂತವನು
ಘಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ2
ಮೇದಿನಿಯೊಳಗೆ ಶುಭೋದಯಕಾರಕ
ಸ್ವಾದೀಸ್ಥಳ ಸರ್ವಾಧಿಕವೈ
ಪಾದದ್ವಯದ ಅಗಾಧ ಮಹಿಮನೇ
ಶ್ರೀದವಿಠಲನಾರಾಧಿಪುದೆಲ್ಲ 3
***