Showing posts with label ತೆರಳಿದರು ವೈಕುಂಠ ಪುರ jagannatha vittala narasimha dasa stutih. Show all posts
Showing posts with label ತೆರಳಿದರು ವೈಕುಂಠ ಪುರ jagannatha vittala narasimha dasa stutih. Show all posts

Friday, 27 December 2019

ತೆರಳಿದರು ವೈಕುಂಠ ಪುರ ankita jagannatha vittala narasimha dasa stutih

ಜಗನ್ನಾಥದಾಸರು
ಶ್ರೀನರಸಿಂಹದಾಸರು, ಮಾನವಿ ಮುನಿಪುಂಗವರಾದ ಶ್ರೀ ಜಗನ್ನಾಥದಾಸರ ತಂದೆಯವರು

 ರಾಗ ಕೇದಾರಗೌಳ           ಖಂಡಛಾಪುತಾಳ 

ತೆರಳಿದರು ವೈಕುಂಠಪುರದರಸನ ।
ಚರಣಾಬ್ಜ ಸೇವಿಸಲು ನರಸಿಂಹದಾಸರು ॥ ಪ ॥

ಜವ ಹರುಷದಿಂದ ಪಾರ್ಥಿವ ವರುಷ ಮಾರ್ಗಶಿರ ।
ಅಪರ ಪಕ್ಷದ ಷಷ್ಟಿ ಭೌಮವಾರ ॥
ದಿವದಿ ಪ್ರಾತಃಕಾಲ ಸಮಯದಲಿ ಶ್ರೀಲಕ್ಷ್ಮೀ - ।
ಧವನಂಘ್ರಿಕಮಲ ಧೇನಿಸುತ ಸಂತೋಷದಲಿ ॥ 1 ॥

ವರಹತನಯಾ ತೀರ ಪ್ರಾಚಿ ದಿಗ್ಭಾಗದಲಿ ।
ಪರಮ ವೈಷ್ಣವ ಸುಕೃತ ಭಾಗಿಯೆಂಬ ॥
ಪುರವರದಿ ತತ್ತ್ವ ತತ್ತ್ವೇಶರೊಳು ಲಯವರಿತು ।
ಪರಮಪುರುಷನ ದಿವ್ಯನಾಮಗಳ ಸ್ಮರಿಸುತಲಿ ॥ 2 ॥

ವರಯಜುಃಶ್ಯಾಖ ಹರಿತಸಗೋತ್ರೋದ್ಭವ ಅನಂ - ।
ತರಸನ ಜಠರದಿ ಜನಿಸಿ ಬಂದೂ ॥
ಗುರುವ್ಯಾಸಮುನಿ ಪುರಂದರದಾಸರಂಘ್ರಿಗಳ ।
ಸ್ಮರಿಸುತ ಜಗನ್ನಾಥವಿಠ್ಠಲ ನೊಲಿಮೆಯ ಪಡೆದು ॥ 3 ॥
************


ತೆರಳಿದರು ವೈಕುಂಠ ಪುರದರಸನ
ಚರಣಾಬ್ಜ ಸೇವಿಸಲು ನರಸಿಂಹದಾಸರು ಪ

ಜವಹರುಷದಿಂದ ಪಾರ್ಥಿವ ಮರುಷ ಮಾರ್ಗಶಿರ
ಅಪರ ಪಕ್ಷದ ಪಪ್ಠಿ ಭೌಮವಾರ
ದಿವದಿ ಪ್ರಾತಃಕಾಲ ಸಮಯದಲಿ ಶ್ರೀ ಲಕ್ಷ್ಮೀ
ಕಮಲ ಧೇನಿಸುತ ಸಂತೋಷದಲಿ 1

ವರಹತನಯಾತೀರ ಪ್ರಾಚಿದಿಗ್ಬಾಗದಲಿ
ಸುಕೃತ ಛಾಗಿಯೆಂಬಾ
ಪುರವರದಿ ತತ್ವ ತತ್ವೇಶರೊಳು ಲಯವರಿತು
ಪರಮ ಪುರುಷನ ದಿವ್ಯ ನಾಮಗಳ ಸ್ಮರಿಸುತಲಿ 2

ಭವ ಅನಂ
ತರಸನ ಜಠರದಿ ಜನಿಸಿ ಬಂದೂ
ಪುರಂದರ ದಾಸರಂಘ್ರಿಗಳ
ಸ್ಮರಿಸುತ ಜಗನ್ನಾಥ ವಿಠಲನೊಲುಮೆಯ ಪಡೆದು 3
************