Showing posts with label ಪುಟ್ಟಿದವೆರಡು ಜೀವನ ಬೈಲು ಬೆಟ್ಟದ ಬೇಲಿಯ purandara vittala. Show all posts
Showing posts with label ಪುಟ್ಟಿದವೆರಡು ಜೀವನ ಬೈಲು ಬೆಟ್ಟದ ಬೇಲಿಯ purandara vittala. Show all posts

Thursday, 5 December 2019

ಪುಟ್ಟಿದವೆರಡು ಜೀವನ ಬೈಲು ಬೆಟ್ಟದ ಬೇಲಿಯ purandara vittala

ರಾಗ ನಾದನಾಮಕ್ರಿಯೆ , ಆದಿತಾಳ

ಪುಟ್ಟಿದವೆರಡು ಜೀವನ ||ಪ ||
ಬೈಲು ಬೆಟ್ಟದ ಬೇಲಿಯ ನುಂಗುತಲಿಹವೋ ||ಅ||

ಆಶ್ರಮದ ಕಪಿ ಬಂದು ಆಕಾಶ ನುಂಗಿತು
ದೇಶವ ನುಂಗಿತು ಒಂದೇ ಅಳಿಲು
ಹಳ್ಳ ಕೊಳ್ಳಗಳ ಕೆರೆಬಾವಿಗಳೆಲ್ಲ
ಆಪೋಶನ ಮಾಡಿತು ಒಂದೇ ಇರುವೆ ||

ಹಲ್ಲಿ ಹೋಗಿ ತಾ ಕಾಲನ ನುಂಗಿತು
ಇಲಿ ಹೋಗಿ ಈರೇಳು ಲೋಕವ ನುಂಗಿತು
ಅಲ್ಲಿದ್ದ ಕೊಡಗಳ ಕೊಡಗೂಸು ನುಂಗಿತು
ಬಲ್ಲಿದವರು ಪೇಳಿ ಈ ಸಂಸ್ಕೃತವ ||

ಕಾಷ್ಠ ಹೋಗಿ ತಾ ಪರ್ವತ ನುಂಗಿತು
ಕೃಷ್ಣನ ನುಂಗಿತು ಕಡಲೇಕಾಯಿ
ದಿಟ್ಟ ಪುರಂದರವಿಠಲರಾಯನೊಬ್ಬನಿಗೆ
ಗುಟ್ಟು ತಿಳಿದೀತು ಈ ಸಂಸ್ಕೃತದ ||
***

pallavi

puttidaveraDU jIvana

anupallavi

bailu beTTada bEliya nungudalihavO

caraNam 1

Ashramada kapi bandu AkAsha nungitu dEshava nungitu onde aLilu
haLLa koLLagaLe kere bAvigaLella ApOshana mADidu onde iruve

caraNam 2

halli hOgi tA kAlana nungitu ili hOgi irELu lOkava nungitu
allidda koDagaLa hasukUsu nungitu ballidavaru pELi I samskrtava

caraNam 3

kASTha pOgi t parvata nungitu krSNna nungitu kaDalekAyi
diTTa purandara viTTala rAyanobbage guTTu tiLitIdu I samskrtada
***