Showing posts with label ಗಂಗಾದೇವಿಯೆ ನಿನಗೆ ಗಂಗಾದೇವಿ ಹಾಡು madhwesha krishna. Show all posts
Showing posts with label ಗಂಗಾದೇವಿಯೆ ನಿನಗೆ ಗಂಗಾದೇವಿ ಹಾಡು madhwesha krishna. Show all posts

Saturday, 28 December 2019

ಗಂಗಾದೇವಿಯೆ ನಿನಗೆ ಗಂಗಾದೇವಿ ಹಾಡು ankita madhwesha krishna

ಗಂಗಾದೇವಿ ಹಾಡು

 ಗಂಗಾದೇವಿಯೆ ನಿನಗೆ ಒಂದೇ ಮನದಲಿ ನೆನೆವೆ
 ಸಿಂಧುರಾಜನ ರಾಣಿ ನೀ ಕರುಣಿಸೆ
 ಮಂಗಳಾಂಗಿಯೆ ನಿನಗೆ ಮುಂದಲೆ ಬಾಗುವೆ
ಮಂದಗಮನಿಯೆ ನೀ ಸುಂದರಾಂಗಿ||ಪಲ್ಲ||

 ಎತ್ತ ನೋಡಿದರತ್ತ ಬಳಕುತ ಬರುವಿಯೆ
 ಸುತ್ತಿ ಸುತ್ತಿ ನೀನು ಪ್ರವಹಿಸುತ
 ಹತ್ತಿ ಇಳಿದು ಗಿರಿ ಶಿಖರದೊಳುರುಳುತ್ತ
 ಶಿಸ್ತಾಗಿ ನೀನು ಹರಿದು ಹೋಗುವಿ||೧||

ಹರಿ ಪಾದೋದಕವಾಗಿ ಹರಿದು ಬಂದಿಯೆ ನೀನು
ಹರಿಯ ಗಿರಿಯ ಸುತ್ತ ಸುಳಿದಾಡುವಿ
 ಸ್ಥಿರವಾಗಿ ಅಳಕನಂದನ ಜೊತೆಗೂಡಿ
 ಭರದಿ ಬರುವಿ ವಯ್ಯಾರದಿಂದ||೨||

ಅಳಕನಂದನ ಕೂಡಿ ಬಳುಕುತ್ತ ಬರುವೀಯೆ
 ಇಳೆಯೊಳು  ಮಿಗಿಲಾಗಿ ಪ್ರವಹಿಸುತ
 ಚಳಿ ಬಿಸಿಲೆನ್ನದೆ ಬಳ ಬಳ ಹರಿಯುವಿ
 ಕಳಿಯ ಸುರಿಯುವಿಯೆ ಕೋಮಲಾಂಗಿ||೩||

 ಅರಿಷಿಣ ಕುಂಕುಮ ಹಚ್ಚಿ ಬೆರಸಿದ ಮಲ್ಲಿಗೇರಿಸಿ
 ಪರಿ ಪರಿ ಪೂಜೆಯ ಮಾಡಿ
 ಮರದ ಬಾಗಿಣವನ್ನ ಮುತೈದೆಯರು ತಂದು
ಸರಸದಿ ನೀಡುವರೆ ತಾಯೆ||೪||

 ಮುಕ್ತ ಕಂಠದಿಂದ ನಿನ್ನ ಹಾಡಿ ಹೊಗಳುತ್ತ
 ಭಕ್ತಿಯಿಂದಾರುತಿಯನೆ ಮಾಡುತ
 ಶ್ರಧ್ಧೆಯಿಂದಲಿ ಮನೆಗೆ ಗಂಗೆ ತುಂಬಿಸಿಕೊಂಡು
ಮಧ್ವೇಶಕೃಷ್ಣನ  ಬೇಡುತ||೫||
**********