Showing posts with label ಮುಂದೆ ನಡಿ ಬೇಗ ಬೇಗನೆ indiresha. Show all posts
Showing posts with label ಮುಂದೆ ನಡಿ ಬೇಗ ಬೇಗನೆ indiresha. Show all posts

Monday, 2 August 2021

ಮುಂದೆ ನಡಿ ಬೇಗ ಬೇಗನೆ ankita indiresha

ಮುಂದೆ ನಡಿ ಬೇಗ ಬೇಗನೆ ಪ

ಮುಂದೆ ನಡಿ ಬೇಗ ಬೇಗನೆ ನಂದತನಯ ನಾರಿ ಪತಸಿಇಂದು ನಿನ್ನ ಬೇಡಿಕೊಂಬೆ ಸುಂದರಾಂಗ ಸಣ್ಣ ಕೂಸೆ ಅ.ಪ

ಕಾಲಿನೊಳಗೆ ರುಳಿಯ ಗೆಜ್ಜೆ ಬಹಳ ಭಾರವಾಯಿತೇನೋನೀಲವಾಲೆಗಳನು ಮುಖದ ಮೇಲೆ ಮಾಡಿಕೊಂಡು ನಡೆಯೊ 1

ಹೊದ್ದ ಜರದ ವಲ್ಲಿ ಕೆಳಗೆ ಸುತ್ತಲಲೆಯತಿಹುದು ನೆಲದಿಎತ್ತಿಕೊಂಡು ಪೋಗೋ ಗೋಪಿ ಮುತ್ತಿನಂಥ ಮುದ್ದು ಕೂಸ2

ಮೆಲ್ಲಮೆಲ್ಲನ್ಹೀಗೆ ಪೋದರೆ ಇಲ್ಲೆ ಕತ್ತಲಾಯಿತಯ್ಯಗೊಲ್ಲರ್ಹುಡುಗ ಇಂದಿರೇಶ ಇಲ್ಲೆ ನಿಲ್ಲೊ ಎತ್ತಿಕೊಂಬೆ 3

****