Showing posts with label ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ purandara vittala VAHAVAARE MENASINAKAAYI VANAROTTIGE TANDENO. Show all posts
Showing posts with label ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ purandara vittala VAHAVAARE MENASINAKAAYI VANAROTTIGE TANDENO. Show all posts

Saturday 4 December 2021

ವಹವ್ವಾರೆ ಮೆಣಸಿನಕಾಯಿ ಒಣರೊಟ್ಟಿಗೆ ತಂದೆನೊ ತಾಯಿ purandara vittala VAHAVAARE MENASINAKAAYI VANAROTTIGE TANDENO



ಮುಂಡಿಗೆ :

ವವ್ವಾರೆ ಮೆಣಸಿನ ಕಾಯಿ ಒಣರೊಟ್ಟಿಗೆ ತಂದೆನು ಕಾಯಿ ||ಪ||

ಹುಟ್ಟತಲಿ ಹಸಿರಾಗುತ ಕಂಡೆ |
ನಟ್ಟನಡುವೆ ಕೆಂಪಾಗುತ ಕಂಡೆ |
ಕಟ್ಟೆರಾಯಗದು ಬಲು ರುಚಿ ಎಂಬೆ ||೧||

ಒಂದೆರಡೆರೆದರೆ ಬಹುರುಚಿ ಎಂಬೆ |
ಮೇಲೆರಡೆರೆದರೆ ತುಸು ಖಾರೆಂಬೆ |
ಮತ್ತೆರಡೆರೆದರೆ ಅತಿ ಖಾರೆಂಬೆ |೨|

ಬಡವರಿಗೆಲ್ಲಾ ನಿನ್ನಾಧಾರ |
ಅಡುಗೆ ಊಟಕ್ಕೆ ನಿನ್ನದೆ ಸಾರ |
ಬಾಯಲ್ಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೋದೆ ಭಾರ ||೩||
***

vavvAre meNasina kAyi oNaroTTige taMdenu kAyi ||pa||
 
huTTatali hasirAguta kaMDe |
naTTanaDuve keMpAguta kaMDe |
kaTTerAyagadu balu ruci eMbe ||1||
 
oMderaDeredare bahuruci eMbe |
mEleraDeredare tusu KAreMbe |
matteraDeredare ati KAreMbe |2|
 
baDavarigellA ninnAdhAra |
aDuge UTakke ninnade sAra |
bAyalli kaDidare beMkiya KAra
puraMdara viThalana neneyOde BAra ||3||
***

pallavi

vahvvAre meNasina kAyi oNaroTTige tandeno tAyi

caraNam 1

huTTudali hasirAguta kaNDe naTTa naDuve
kempAguta kaNDe kaTTerAyana bahu ruciyembe

caraNam 2

onderaDaredare bahu ruciyembe mEleraDaredare
bahu khArembe adu eraDaredare ati khAremba

caraNam 3

baDavarigella ninnAdhAra aDige Utakke ninna sAra bAyali
kaDedare bemkiya khAra purandara vIttalana neneyodu bhAra
***

ಪುರಂದರದಾಸರ ಮುಂಡಿಗೆ 
:
ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ |೨ |
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |

ವಹವ್ವಾರೆ ಮೆಣಸಿನಕಾಯಿ–
ಪ್ರತಿಯೊಬ್ಬ ಜೀವಿಗಳು ವಿಚಿತ್ರ ಸ್ವಭಾವವುಳ್ಳವರಾಗಿರುತ್ತಾರೆ.  – ವಹವ್ವಾರೆ.     “ಬಹುಚಿತ್ರ ಜಗದ್ಬಹುದಾಕರಣಾತ್ ಪರಶಕ್ತಿರನಂತ ಗುಣ: ಪರಮ:”.   ಭೇದದಿಂದ ಕೂಡಿರುವ ಈ ಚಿತ್ರ ವಿಚಿತ್ರ ಜಗತ್ತನ್ನು ನೋಡಿಯಾದರೂ ಭಗವಂತನನ್ನು ಅರಿಯಬೇಕು.  ದಪ್ಪ ಮೆಣಸಿನಕಾಯಿ, ಖಾರ ಮೆಣಸಿನಕಾಯಿ, ಚಿಕ್ಕ ಮೆಣಸಿನಕಾಯಿ, ಬೋಂಡ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ವಿಚಿತ್ರ ಆಕಾರ – ರುಚಿ ಹೇಗೆ ಚಿತ್ರ ವಿಚಿತ್ರವಾಗಿರತ್ತೋ ಅದೇ ರೀತಿ ಜೀವಿಗಳೆಲ್ಲ ಸಾತ್ವಿಕ ರಾಜಸ ತಾಮಸವೆಂದು ಭಿನ್ನರಾಗಿರುತ್ತಾರೆ.

ಒಣರೊಟ್ಟಿಗೆ ತಂದೆನೋ ತಾಯಿ : ಒಣರೊಟ್ಟಿ – ಸಾರರಹಿತ ಸಂಸಾರ; ತಾಯಿ – ಪ್ರಕೃತಿ ಮಾತೆ ಲಕ್ಷ್ಮೀದೇವಿ.

ಹುಟ್ಟುತಲೀ ಹಸಿರಾಗುತ ಕಂಡೆ: –  ಮೆಣಸಿನಕಾಯಿ ಹುಟ್ಟಿದಾಗ ಹಸಿರಾಗಿರುತ್ತೆ. ಹುಟ್ಟುವಾಗ (ಬಾಲ್ಯದಲಿ) ಸಂಸಾರದ ಹೊರೆ, ಮುಂದಿನ ಭಯ, ಯಾವುದೂ: ತಿಳಿಯದೆ ಜಗತ್ತು ಹಸಿರಾಗಿಯೇ ಕಂಡಿತು.

ನಟ್ಟನಡುವೆ ಕೆಂಪಾಗುತ ಕಂಡೆ : – ನಟ್ಟನಡುವೆ ಅಂದರೆ ತಾರುಣ್ಯದಲ್ಲಿ – ಬಿಸಿರಕ್ತವಿರುತ್ತದೆ. ಮೆಣಸಿನಕಾಯಿ ಕೆಂಪಾಗಿರುತ್ತೆ.  ಯೌವನ – ಕೋಪತಾಪಗಳ ಸಂಗಮ – ಲೌಕಿಕಾವಸ್ಥೆಯಲ್ಲಿ ಮುಳುಗಿ ಭಗವಂತನನ್ನೇ ಮರೆತಿರುತ್ತೇವೆ.

ಕಟ್ಟೆರಾಯನ ಬಲುರುಚಿಯೆಂಬೆ – ಕಟ್ಟೆರಾಯ ಅಂದರೆ ಭವಂತನಿರುವವರೆಗೂ ಯೌವ್ವನದ ಹಾರಾಟ ನಡೆಯುತ್ತಿರುತ್ತೆ.  ತಟ್ಟೇರಾಯನಂತೆ ತಾನು ಅಸ್ವತಂತ್ರನಾದರೂ ಸ್ವತಂತ್ರನಾದ ಕಟ್ಟೆಯ (ಸಿಂಹಾಸನ) ಮೇಲೆ ಕುಳಿತಿರುವನಂತೆ ತಿಳಿದು ಹಾಳಾಗುವುದು.  ಈ ಸಾಂಸಾರಿಕ ವಿಷಯ ವಸ್ತುಗಳು ವಿಷದಂತಿದ್ದರೂ ಅರ್ಥವಾಗದೆ ಬಲುರುಚಿಯಾಗಿದೆ ಎಂದೇ ಭ್ರಮಿಸುವೆವು.  ಇದನ್ನೇ ಕಟ್ಟೇರಾಯನಿಗೆ ಬಲುರುಚಿಯೆಂಬೆ ಎಂದಿದ್ದಾರೆ.

ಒಂದೆರಡೆರೆದರೆ ಬಹುರುಚಿಯೆಂಬೆ – (ಒಂದು + ಎರಡು = ಮೂರು) ಈ ಸಂಸಾರದಲ್ಲಿ ಯೌವ್ವನ, ಮದದ ಜೊತೆಗೆ ಹಾಳು ಮಾಡಲು ಕಾಮ, ಕ್ರೋಧ, ಲೋಭಗಳು (ಅಂದರೆ ಒಂದರ ಜೊತೆಗೆ ಇನ್ನೊಂದೆರಡು ಮೆಣಸಿನಕಾಯಿ ಸೇರಿಸಿದರೆ) ಬಹುರುಚಿಯೆಂಬಂತೆ ಇರುತ್ತೆ ಈ ಸಂಸಾರ.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮ ಕ್ರೋಧಾದಿಗಳ ಜೊತೆ ಇನ್ನೂ ಎರಡು ಮೆಣಸಿನಕಾಯಿ ಸೇರಿದರೆ ( ೩  ೨ = ೬) ಕಾಮಕ್ರೋಧಾದಿ ಆರು ಸೇರಿದರೆ, ಭಗವಂತನ ಸ್ಮರಣೆಯೇ ಇಲ್ಲದೇ ತಾನೇ ಸರ್ವ ಸ್ವತಂತ್ರವೆಂಬ ದುರಹಂಕಾರ ಬಂದು ಮೆರೆವಾಗ, ಇನ್ನೊಬ್ಬ ಬಲಿಷ್ಟನಿಂದ ಅವಮಾನವಾದಾಗ ಬಹುಖಾರೆಂಬ ಅವಮಾನವಾಯಿತು.

ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮಕ್ರೋಧಾದಿಗಳ ಜೊತೆಗೆ ಇನ್ನೂ ಎರಡು ಮೆಣಸಿನಕಾಯಿಗಳು ಸೇರಿದರೆ (೬ + ೨ = ೮) ಅಷ್ಟ ಮದಗಳೂ ಸೇರಿದ್ದರೆ, ಅಂದರೆ ಯೌವ್ವನ, ಧನ, ಅಧಿಕಾರ, ಅವಿವೇಕಾದಿಗಳೂ ಸೇರಿದ್ದರೆ; ಇವುಗಳಲ್ಲಿ ಒಂದೊಂದಿದ್ದರೂ ಅನರ್ಥಕಾರಿ.  ಎಲ್ಲವೂ ಸೇರಿದರೆ ಕೇಳುವುದೇ ಬೇಡ. ಬಡವರಿಗೆಲ್ಲಾ ನಿನ್ನಾಧಾರ – ಭಗವಂತನ ಭಕ್ತರಾದ ಕುಚೇಲ ಮೊದಲಾದವರಿಗೆಲ್ಲ ನಿನ್ನ ನಾಮವೇ ಆಧಾರ.  ಭೋಜನ ಮಾಡುವಾಗಲೂ ಗೋವಿಂದ ಎಂದು ಉಚ್ಚರಿಸುತ್ತಾ ಭುಂಜಿಸಬೇಕು.  ಅಡಿಗೆ ಮಾಡುವಾಗಲೂ ಭಗವಂತನ ನಾಮೋಚ್ಚಾರಣ ಪೂರ್ವಕ ಮಾಡಬೇಕು.

ಬಾಯಲ್ಲಿ ಕಡಿದರೆ ಬೆಂಕಿಯ ಖಾರ –  ಬಾಯಲ್ಲಿ ಮೆಣಸಿನಕಾಯಿ ಕಡಿದರೆ ಹೇಗೆ ಖಾರದಿಂದ ಭಗವಂತನ ಸ್ಮರಣೆ ಕಷ್ಟವೋ, ಹಾಗೆ ಸಂಸಾರಿಕ ವಿಷಗಳಿಂದ ಕಾಮಕ್ರೋಧಾದಿ ಕಿಚ್ಚುಗಳಿಂದ ಪುರಂದರ ವಿಠಲನ ನೆನೆಯೋದು ಅತಿ ಪ್ರಯಾಸಕರವಾದದ್ದು.  ಆದ್ದರಿಂದ ಈ ಮೆಣಸಿನಕಾಯಿಯಂತೆ ಭಗವಂತರನ್ನು ಮರೆಸುವ ಈ ವಿಷಯ ಪದಾರ್ಥಗಳನ್ನು ತೊರೆದು, ಭಗವನ್ನಾಮಾಮೃತವನ್ನು ಪಾನ ಮಾಡಿರಿ ಎಂದಿದ್ದಾರೆ ಪುರಂದರ ದಾಸರು.

(Source for Mundige :  
Dr Chaturvedi Vedavyasacharya)
***


ವಹವ್ವಾರೆ ಮೆಣಸಿನಕಾಯಿ 
ಒಣರೊಟ್ಟಿಗೆ ತಂದೆನೊ ತಾಯಿ  ||ಪ||

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ ||೧||

ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡರೆದರೆ ಅತಿ ಖಾರೆಂಬೆ ||೨||

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೋದು ಭಾರ ||೩||

ಭಗವಂತನಿಗೆ ಅರ್ಪಣೆಗೋಸ್ಕರ ಮಾತ್ರವಲ್ಲದೆ ಭಕ್ತಾದಿಗಳ ಬದುಕಿಗೆ ಬೆಳಕಾಗುವಂತೆ ಬರೆದ ಹಿತನುಡಿಯ ಪದಗಳಲ್ಲೂ ದಾಸರು ತಿಂಡಿತಿನಿಸನ್ನು ಉಲ್ಲೇಖಿಸಿದ್ದಾರೆ. ಅಂಥವುಗಳ ಪೈಕಿ ಒಂದೆರಡನ್ನು ಅವಲೋಕಿಸೋಣ.
ಜಿಪುಣಬುದ್ಧಿಯವರನ್ನು ಮೂದಲಿಸುತ್ತ ದಾಸರು ‘ಹುಗ್ಗಿಯ ತುಪ್ಪವು ಮನೆಯಾಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲ ಪ್ರಾಣಿ... ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ...’ ಎಂದಿದ್ದಾರೆ - ‘ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೊ ಪ್ರಾಣಿ...’ ಎಂಬ ಕೃತಿಯಲ್ಲಿ. ಇಂಥ ಜಿಪುಣರು ನಮ್ಮ-ನಿಮ್ಮ ದೈನಂದಿನ ವ್ಯವಹಾರಗಳಲ್ಲೂ ಬೇಕಾದಷ್ಟು ಮಂದಿ ಸಿಗುತ್ತಾರಲ್ಲವೆ? ಇದ್ದಾಗ ಅದನ್ನು ಅನುಭವಿಸಿ ಆನಂದಿಸದೆ ಅದಿಲ್ಲ ಇದಿಲ್ಲ ಎಂದು ಪರಿತಪಿಸುವ ಅಳುಮುಂಜಿಗಳಿಗೇನು ಕೊರತೆಯಿದೆಯೇ? ಇರುವುದನು ಬಿಟ್ಟು ಇಲ್ಲದುದರ ಕಡೆ ತುಡಿತ.... ಅಡಿಗರು ಅಡಿಗೆ ಮಾಡಿ ನಮಗೆ ಬಡಿಸಿದ್ದೂ ಅದೇ ತತ್ವವನ್ನಲ್ಲವೇ?

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
******

ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |

ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ | ೨ |

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |
****

ರಾಗ ನಾದನಾಮಕ್ರಿಯೆ ಏಕತಾಳ

ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ ||ಪ||

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟ ನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹು ರುಚಿಯೆಂಬೆ ||

ಒಂದೆರಡರೆದರೆ ಬಹು ರುಚಿಯೆಂಬೆ
ಮೇಲೆರಡರೆದರೆ ಬಹು ಖಾರೆಂಬೆ
ಅದು ಎರಡರೆದರೆ ಅತಿ ಖಾರೆಂಬ ||

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕ್ಕೆ ನಿನ್ನ ಸಾರ
ಬಾಯಲಿ ಕಡೆದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೊದು ಭಾರ ||
******