..
kruti by radhabai
ಪಾಲಿಸೆಮ್ಮನು ವೆಂಕಟೇಶಾ ನಂಬಿದೆ ನಿನ್ನ ಪಾದಾ
ಸಲಹೋ ಗಿರೀಶಾ ಪಾಲಿಸು ಪನ್ನಗಾ ಚಲವಾಸಾ
ಪಾಲಿಸುವ ನ್ನ ಸರ್ವೇಶಾ ಪ
ಪರಿಪರಿಯಲಿ ನಿನ್ನನಾ ಅನುದಿನ ಕೊಂಡಾಡುವೆನಾ
ಪತಿತ ಪಾವನ ನೀನೇಗತಿಯೆಂದು ನಂಬಿದೆ
ಸನ್ಮತಿಯ ಪಾಲಿಸು ದೇವಾ ಅಹಿಗಿರಿ ನಿಲಯಾ 1
ಕರುಣಾಳು ನೀನೆನುತಾ ನಿನ್ನ ಬಳಿ ಬಂದೇನು ಬಹು ತ್ವರಿತಾ
ಕರಣಶುದ್ಧನ ಮಾಡಿ ಕರೆದುಕೋ ಯನ್ನನು
ಕರುಣಾಕರ ವೆಂಕರಾಯಾ ಜೀಯಾ2
ಕಲಿಯುಗದೊಳಗೆ ನಿನ್ನ ಮಹಿಮೆಯ ಪೊಗಳಲೆನ್ನೊಶವೆ
ಮುನ್ನಾ ಅಗಣಿತ ಮಹಿಮನೀನೆನುತಾ ಸಾರುತಲಿರೆ
ಸರಿಯಾರು ನಿನಗೇ ಮೂಲೋಕದ ದೊರೆಯೇ 3
ಕರೆಕರೆ ಸಂಸಾರದೀ ಕೊರಗುತ್ತ ಮರುಗುತ್ತಲಿಹೆ ಭರದೀ
ಕರುಣಿಗಳರಸನೆ ಕಾರುಣ್ಯ ಮೂರುತಿ
ಕಣ್ದೆರೆದು ನೋಡೆಮ್ಮನು ಕನಕಾದ್ರಿಗೊಡೆಯಾ4
ಅರ್ಥಿಯಿಂದಲಿ ನಿನ್ನ ಬಲು ಪರಿಯಿಂದಲಿ ನುತಿಪೆನಾ
ಕಡೆಗೆ ನೀನಲ್ಲದೆ ಮತ್ಯಾರಿಹರೊ ದೇವಾ
ಸತ್ಯ ಮೂರುತಿ ನೀನೆ ಹತ್ತಿರ ಕರೆದು ಸಲಹೋ 5
ಹಿಂದೆ ಪ್ರಹ್ಲಾದನ ನುಡಿಯಾ ಕೇಳಿ ನೀ ಕಂಬದಿಂದೊಡೆದು ಬಂದೆ
ಅಂಧಕಾರದಿ ಮುಳುಗಿ ಮುಂದೆ ಕಾಣದಲಿರುವೆ ಒಡೆಯ
ಬಂದೆನ್ನ ಕಾಯೋ ಶ್ರೀ ಇಂದಿರೆ ರೆಮಣಾ 6
ಬೆಟ್ಟದ ಮೇಲಿರುವೇಬಂದ ಬಂದವರಿಗನಂತ
ವರವ ಕೊಡುವೇ
ನಿಷ್ಠೆಯಿಂದಲಿ ಮನ ಮುಟ್ಟಿ ಭಜಿಸುವರ
ಇಷ್ಟಾರ್ಥಗಳ ಕೊಡುವೆ ವೆಂಕಟವಿಠಲಾ 7
***