Showing posts with label ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ jnanabodha. Show all posts
Showing posts with label ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ jnanabodha. Show all posts

Thursday, 5 August 2021

ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ ankita jnanabodha

 ..

ಎಂತು ಗುರು ಪೂಜೆಯ ಮಾಡಲಿನಿಂತಿಹನು ಅಂತರ್ಬಾಹ್ಯದಲಿ ಪ

ಪಾಣಿಪಾದ ವಾಕು ಮೊದಲಲ್ಲಿಜ್ಞಾನೇಂದ್ರಿಯ ಪಂಚಕ ನೋಡಲ್ಲಿ |ಪ್ರಾಣಾಪಾನ ವ್ಯಾನೋದಾನದಲ್ಲಿತಾನೇ ಇಹ ದಶಪ್ರಾಣದಲ್ಲಿ 1

ಆಕಾಶಾದಿ ಪಂಚಭೂತದಲ್ಲಿಅಕಾರಾದಿ ಮೂರು ಮಾತ್ರೆಯಲ್ಲಿ |ಲೋಕತ್ರಯ ವ್ಯಾಪಕವಲ್ಲಿ |ಏಕೋ ಮೂರ್ತಿ ತುಂಬಿಹವಿವನಲ್ಲಿ 2

ಭಾನುಶಶಿ ನಕ್ಷತ್ರಂಗಳಲ್ಲಿನಾನಾ ಜಾತಿ ಕುಲಗೋತ್ರದಲ್ಲಿ |ತಾನು ತಾನೇ ತೋರಿಸುವಲ್ಲಿಜ್ಞಾನಬೋಧ ಬೇರುಂಟು ಮತ್ತೆಲ್ಲಿ 3

***