ಕಾರ್ತೀಕ ಮಾಸದಲ್ಲಿ ಕಾಮಪಿತನ ಪೂಜಿಸೆ//ಪ//.
ಕಾರ್ತೀಕ ಮಾಸದಲ್ಲಿ ಕಾಮನ ಪಿತನ ಕುಳ್ಳಿರಿಸಿ /
ದೇವಕಿ ಸುತನ ಪೂಜಿಸಿ/
ಮಾಸಾಭಿಮಾನಿ ದಾಮೋದರನ ಭಜಿಸಿ/
ಲೇಸು ಸಂಪಿಗೆ ಗಂಧೆಣ್ಣೆ ಸಮರ್ಪಿಸಿ/
ಮಹಾಪುಣ್ಯ ಪುರುಷೋತ್ತಮ ನ
ಕೊಂಡಾಡುತ ಎಣ್ಣೆ ಶಾಸ್ತ್ರ ವನೆ ರಚಿಸಿರಿ//೧//.
ಪುಣ್ಯ ಸಾಧನದ ಜನರೆಲ್ಲಾ /
ಬ್ರಾಹ್ಮೀ ಸುಮುಹೂರ್ತದಲೆ ತಾವೆದ್ದು/
ಕುಂಭಿಣೀ ಕಸ್ತೂರಿ ಕರ್ಪೂರ ದ ವೀಳವ ಪಿಡಿದು/
ಮಹಾ ಪುಣ್ಯ ಪುರುಷೋತ್ತಮ ನ ಕೊಂಡಾಡುತ
ಎಣ್ಣೆ ಶಾಸ್ತ್ರ ವನು ರಚಿಸಿರಿ//೨//.
ಸೃಷ್ಟಿ ಗೆ ಕರ್ತ ಶ್ರೀಹರಿಯು/
ಸೃಷ್ಟಿಸಿದನು ದೀಪಾವಳಿಯ/
ಉತ್ತಮ ಚತುರ್ದಶಿ ದಿನದಲೆ ಬಂದು/
ಮತ್ತೆ ನರಕಾಸುರನ ವಧೆಯನು ಮಾಡಿ/
ಭಕ್ತರಿಗೊಲಿದ ಉತ್ತಮ ಶ್ರೀ ಹಯವದನ ಗೆ
ಎಣ್ಣೆ ಶಾಸ್ತ್ರ ವ ರಚಿಸಿರಿ //೩//..
****