Showing posts with label ಇಂದು ಎನ್ನನು ಬಂದು ರಕ್ಷಿಸೋ janardhana vittala. Show all posts
Showing posts with label ಇಂದು ಎನ್ನನು ಬಂದು ರಕ್ಷಿಸೋ janardhana vittala. Show all posts

Friday, 27 December 2019

ಇಂದು ಎನ್ನನು ಬಂದು ರಕ್ಷಿಸೋ ankita janardhana vittala

ಇಂದು ಎನ್ನನು ಬಂದು ರಕ್ಷಿಸೋ
ತಂದೆ ಗುರುರಾಘವೇಂದ್ರನೇ
ಮಂದಮತಿ ನಾ ಮನದಿ ಮಾಡುವ
ಕುಂದುಗಳ ನೀನೆಣಿಸದೆ                || ಪ ||

ಭಕ್ತಿ ಕರ್ಮ ವಿರಕ್ತಿಯನು ಮಾಡಿ
ಭಕ್ತಜನ ನಿನ್ನ ಸಂಗದೊಳು ನಲಿದು
ಉಕ್ತಿವಂದನ ನುಡಿದು ಪರಮಾಸಕ್ತಿಯಿಂದ ಪಾಡುತ
ತ್ಯಕ್ತಿಸಿ ವಿಷಯಾಂಬುಧಿಯನು
ಮುಕ್ತಿದಾತನ ನಾಮ ಮುಂಕೊಂಡು
ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತ ನೀನೆಂದು ನಂಬಿದೆ    || ೧ ||

ವಾರ್ತೆ ನುಡಿ ಸರಿ ಕೀರ್ತಿ ಪುರುಷನೆ
ಆರ್ತನಾಗಿ ಆಚರಿಪ ಜಗ
ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃಮಾತೃ
ಪಿತೃಬಒಧುವೆ ಪೂರ್ತಿಸದೊ ಮನ
ಸ್ತೋತ್ರ ಮಾಡಲು ತೀರ್ಥತುಂಗತೀರವಾಸನೆ
ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ        || ೨ ||

ಕರವಪಿಡಿ ಜ್ಞಾನಕಾಮಧೇನುವೆ
ಚರಣ ಪೊಂದಿದೆ ಚಿಂತಾಮಣಿಯೆಂದು
ನರಮಾತ್ರದವ ಮರೆತ ಕಾಲಕು ಪರಿಗ್ರಹವ ಮಾಡಿ ಪರಸುಖ
ಪರಿಪಾಲಿಪ ರಾಮನಾದ ಜನಾರ್ಧನವಿಠ್ಠಲನ್ನ ಪಾದವ
ನಿರುತ ಹೃದಯ ನಿಮ್ಮದಲಿ ತೋರುವ
ಶರಣಜನ ಮನೋಹರನೆ            || ೩ ||
********