ಇಂದು ಎನ್ನನು ಬಂದು ರಕ್ಷಿಸೋ
ತಂದೆ ಗುರುರಾಘವೇಂದ್ರನೇ
ಮಂದಮತಿ ನಾ ಮನದಿ ಮಾಡುವ
ಕುಂದುಗಳ ನೀನೆಣಿಸದೆ || ಪ ||
ಭಕ್ತಿ ಕರ್ಮ ವಿರಕ್ತಿಯನು ಮಾಡಿ
ಭಕ್ತಜನ ನಿನ್ನ ಸಂಗದೊಳು ನಲಿದು
ಉಕ್ತಿವಂದನ ನುಡಿದು ಪರಮಾಸಕ್ತಿಯಿಂದ ಪಾಡುತ
ತ್ಯಕ್ತಿಸಿ ವಿಷಯಾಂಬುಧಿಯನು
ಮುಕ್ತಿದಾತನ ನಾಮ ಮುಂಕೊಂಡು
ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತ ನೀನೆಂದು ನಂಬಿದೆ || ೧ ||
ವಾರ್ತೆ ನುಡಿ ಸರಿ ಕೀರ್ತಿ ಪುರುಷನೆ
ಆರ್ತನಾಗಿ ಆಚರಿಪ ಜಗ
ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃಮಾತೃ
ಪಿತೃಬಒಧುವೆ ಪೂರ್ತಿಸದೊ ಮನ
ಸ್ತೋತ್ರ ಮಾಡಲು ತೀರ್ಥತುಂಗತೀರವಾಸನೆ
ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ || ೨ ||
ಕರವಪಿಡಿ ಜ್ಞಾನಕಾಮಧೇನುವೆ
ಚರಣ ಪೊಂದಿದೆ ಚಿಂತಾಮಣಿಯೆಂದು
ನರಮಾತ್ರದವ ಮರೆತ ಕಾಲಕು ಪರಿಗ್ರಹವ ಮಾಡಿ ಪರಸುಖ
ಪರಿಪಾಲಿಪ ರಾಮನಾದ ಜನಾರ್ಧನವಿಠ್ಠಲನ್ನ ಪಾದವ
ನಿರುತ ಹೃದಯ ನಿಮ್ಮದಲಿ ತೋರುವ
ಶರಣಜನ ಮನೋಹರನೆ || ೩ ||
********
ತಂದೆ ಗುರುರಾಘವೇಂದ್ರನೇ
ಮಂದಮತಿ ನಾ ಮನದಿ ಮಾಡುವ
ಕುಂದುಗಳ ನೀನೆಣಿಸದೆ || ಪ ||
ಭಕ್ತಿ ಕರ್ಮ ವಿರಕ್ತಿಯನು ಮಾಡಿ
ಭಕ್ತಜನ ನಿನ್ನ ಸಂಗದೊಳು ನಲಿದು
ಉಕ್ತಿವಂದನ ನುಡಿದು ಪರಮಾಸಕ್ತಿಯಿಂದ ಪಾಡುತ
ತ್ಯಕ್ತಿಸಿ ವಿಷಯಾಂಬುಧಿಯನು
ಮುಕ್ತಿದಾತನ ನಾಮ ಮುಂಕೊಂಡು
ಯುಕ್ತಿಯಿಂದಾಚರಿಸದಲೆ ಸಲಹೊ ಶಕ್ತ ನೀನೆಂದು ನಂಬಿದೆ || ೧ ||
ವಾರ್ತೆ ನುಡಿ ಸರಿ ಕೀರ್ತಿ ಪುರುಷನೆ
ಆರ್ತನಾಗಿ ಆಚರಿಪ ಜಗ
ಪಾರ್ಥಸಖನಾಪಾರ ತಂತ್ರಬಲ್ಲ ಭ್ರಾತೃಮಾತೃ
ಪಿತೃಬಒಧುವೆ ಪೂರ್ತಿಸದೊ ಮನ
ಸ್ತೋತ್ರ ಮಾಡಲು ತೀರ್ಥತುಂಗತೀರವಾಸನೆ
ಮೂರ್ತಿಮಂತದಿ ನಿಂತು ಮುಖದಾ ಮೂರ್ತಾಮೂರ್ತದಿ ಮುನಿರಾಯ || ೨ ||
ಕರವಪಿಡಿ ಜ್ಞಾನಕಾಮಧೇನುವೆ
ಚರಣ ಪೊಂದಿದೆ ಚಿಂತಾಮಣಿಯೆಂದು
ನರಮಾತ್ರದವ ಮರೆತ ಕಾಲಕು ಪರಿಗ್ರಹವ ಮಾಡಿ ಪರಸುಖ
ಪರಿಪಾಲಿಪ ರಾಮನಾದ ಜನಾರ್ಧನವಿಠ್ಠಲನ್ನ ಪಾದವ
ನಿರುತ ಹೃದಯ ನಿಮ್ಮದಲಿ ತೋರುವ
ಶರಣಜನ ಮನೋಹರನೆ || ೩ ||
********
No comments:
Post a Comment